ಮಂಡ್ಯ: ನೋಟಿಸ್ ಕೊಡಲು ಬಂದ ಕೋರ್ಟ್ ಅಮೀನ್ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿದ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.
ಅಪಘಾತ ಪ್ರಕರಣ ಸಂಬಂಧ ನೋಟಿಸ್ ಕೊಡಲು ಬಂದಿದ್ದ ಅಮೀನ್‌ಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಸಿವಿಲ್ ಕೋರ್ಟ್ ಅಮೀನ್ ಶಂಕರೇಗೌಡ ಕಣ್ಣಿಗೆ ಸಾಕಮ್ಮ ಎಂಬುವವರು ಖಾರದಪುಡಿ ಎರಚಿದ್ದಾರೆ.
ಇನ್ನು ಪೊಲೀಸರಿಗೂ ಮಾಹಿತಿ ನೀಡದೇ ಅಮೀನ್ ಸ್ಥಳಕ್ಕೆ ಹೋಗಿದ್ದರು ಎನ್ನಲಾಗಿದ್ದು, ಚಿಕ್ಕಮಗಳೂರಿನಲ್ಲಿ ನಡೆದ ಅಪಘಾತ ಪ್ರಕರಣ ಸಂಬಂಧ ನೋಟಿಸ್ ಕೊಡಲು ಹೋಗಿದ್ದರು.
ವಾಹನ ಮಾಲೀಕನ ಜೊತೆಗೆ ನೇರವಾಗಿ ಕೋರ್ಟ್ ಅಮೀನ್ ತೆರಳಿದ್ದರು. ಸದ್ಯ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಖಾರದಪುಡಿ ಎರಚುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.





