Mysore
21
overcast clouds
Light
Dark

ಮಂಡ್ಯ: ಕಾವೇರಿಯಲ್ಲಿ ತೇಲಿಬಂದ ಜೋಡಿ ಹೆಣ ನೋಡಲು ಮುಗಿಬಿದ್ದ ಸ್ಥಳೀಯರು

ಶ್ರೀರಂಗಪಟ್ಟಣ: ಕಾವೇರಿ ನದಿಯಿಂದ ತೇಲಿಬಂದ ಪುರುಷ-ಮಹಿಳೆ ಜೋಡಿ ಹೆಣವನ್ನು ನೋಡಲು ಸ್ಥಳೀಯರು ಮುಗಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂತೆಮಾಳದಲ್ಲಿ ನಡೆದಿದೆ.

ಅನುಮಾನಾಸ್ಪದ ರೀತಿಯ ಪುರುಷ ಮತ್ತು ಮಹಿಳೆಯ ಹೆಣ ಸಿಕ್ಕಿರುವುದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಹೆಣ ಒಮ್ಮೆಲೇ ತೇಲಿ ಬುರತ್ತಿರುವುದನ್ನು ಕಂಡ ಸ್ಥಳೀಯರು ಮೇಲಿಂದ ಮೇಲೆ ಹೆಣ ನೋಡಲು ಮುಗಿ ಬೀಳುತ್ತಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಪೊಲೀಸರು, ನದಿಯಿಂದ ಹೆಣ ಹೊರ ತೆಗೆದು ಅವರ ಗುರುತು ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಇನ್ನು ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.