ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್‌ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮಾರಮ್ಮ ದೇವಿ ಕರಗದ ಸಂದರ್ಭದಲ್ಲಿ ಕರಗ ನಿಮಿತ್ತ ನಡೆದ ಕೊಂಡೋತ್ಸವದಲ್ಲಿ ಕರಗ ಹೊತ್ತಿದ್ದ ದೇವರ ಗುಡ್ಡಪ್ಪ ನಿಯಂತ್ರಣ ತಪ್ಪಿ ಬೆಂಕಿ ಕೆಂಡದ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಜತೆಗೆ ಅವರನ್ನು ರಕ್ಷಿಸಲು ಮುಂದಾದ ಅವರ ಸಹೋದರಿ ಕೂಡ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕರಗ ಹೊತ್ತು ಏಳೆಂಟು ಹೆಜ್ಜೆ ಹಾಕಿದ್ದ ದೇವರ ಗುಡ್ಡಪ್ಪ ಬಿ.ಕುಮಾರ್ ಅವರ ಕಾಲಿಗೆ ಪಂಚೆ ಸಿಕ್ಕಿಕೊಂಡು ಮುಗ್ಗರಿಸಿ ಮಕಾಡೆ ಬಿದ್ದರು. ಮುತ್ತು ಮಾರಮ್ಮನ ಕರಗ ಅವರ ತಲೆಯ ಮೇಲಿಂದ ಕಳಚಿ ಕೆಂಡದ ಮೇಲೆ ಬಿತ್ತು. ಈ ವೇಳೆ ಕೊಂಡದಲ್ಲಿ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಹೋಗಿ ಅವರ ಸಹೋದರಿ ಕೂಡ ಗಾಯಗೊಂಡರು. ತಕ್ಷಣ ಪಕ್ಕದಲ್ಲಿದ್ದವರು ಇಬ್ಬರನ್ನೂ ಕೊಂಡದಿಂದ ಮೇಲೆ ಎತ್ತಿ, ಆಸ್ಪತ್ರೆಗೆ ದಾಖಲಿಸಲಾಗಿದೆ.





