Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಶ್ರೀರಂಗಪಟ್ಟಣ | ಒಡೆಯರ್‌ ಕಾಲದ 10 ಕಲ್ಲಿನ ಗುಂಡುಗಳು ಪತ್ತೆ

ಶ್ರೀರಂಗಪಟ್ಟಣ : ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಪಕ್ಕದಲ್ಲಿ ಎಲ್‌ಐಸಿ ಶಾಖೆ ಕಚೇರಿ ಕಟ್ಟಡ ನಿರ್ಮಾಣದ ತಳಪಾಯಕ್ಕಾಗಿ ಭೂಮಿ ಅಗೆಯುವ ವೇಳೆ ಒಡೆಯರ್ ಕಾಲಕ್ಕೆ ಸೇರಿದ 10 ಕಲ್ಲಿನ ಗುಂಡುಗಳು ಪತ್ತೆಯಾಗಿವೆ.

ಭಾನುವಾರ ಏಳು ಹಾಗೂ ಸೋಮವಾರ ಮೂರು ಕಲ್ಲಿನ ಗುಂಡುಗಳು ಸಿಕ್ಕಿವೆ. ಕೆನರಾ ಬ್ಯಾಂಕ್ ಶಾಖೆ ಕಟ್ಟಡಕ್ಕೆ ಐದಾರು ಅಡಿ ದೂರದಲ್ಲಿ ಈ ಗುಂಡುಗಳು ಪತ್ತೆಯಾಗಿವೆ. ನೆಲ ಮಟ್ಟದಿಂದ 5 ಅಡಿಗಳಷ್ಟು ಆಳದಲ್ಲಿ ಈ ಗುಂಡುಗಳು ಕಂಡು ಬಂದಿವೆ. ಈ ಗುಂಡುಗಳು ಸಿಕ್ಕಿರುವ ಸ್ಥಳದಲ್ಲಿ ಸುರಕಿ ಗಾರೆ ಮತ್ತು ಮಣ್ಣಿನ ಸುಟ್ಟ ಇಟ್ಟಿಗೆಗಳ ಗೋಡೆಯಂತಹ ರಚನೆ ಕೂಡ ಕಾಣಿಸಿದೆ. ಒಂದೆಡೆ ಕಾಡುಗಲ್ಲಿನ ವರಸೆಯೂ ಗೋಚರಿಸಿದೆ. ಎಲ್‌ಐಸಿ ಕಚೇರಿ ಕಟ್ಟಡ ನಿರ್ಮಾಣ ಉದ್ದೇಶಕ್ಕೆ 15ಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದಿದ್ದು, ಈ ಪೈಕಿ ಮೂರು ಗುಂಡಿಗಳಲ್ಲಿ ಪ್ರಾಚೀನ ಕಟ್ಟಡದ ಕುರುಹುಗಳು ಕಂಡು ಬಂದಿವೆ.

ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್ ಸುನಿಲ್, ಸಹಾಯಕ ಇಂಜಿನಿಯರ್ ಕೆ. ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಪ್ರಾಚೀನ ಅವಶೇಷಗಳು ಮತ್ತೆ ಸಿಕ್ಕಿದರೆ ತಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬೇಕು. ಐತಿಹಾಸಿಕ ಕುರುಹುಗಳನ್ನು ನಾಶಪಡಿಸಬಾರದು ಎಂದು ಎಲ್‌ಐಸಿ ಅಧಿಕಾರಿಗಳಿಗೆ ಸೂಚಿಸಿದರು.

Tags:
error: Content is protected !!