ಮಳವಳ್ಳಿ: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಹೂವಿನಕೊಪ್ಪಲು ಬಳಿ ಇರುವ ಮರದ ಸಾ ಮಿಲ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಪ್ರವೀಣ್ (21) ಆರೋಪಿ ಎಂದು ಗುರುತಿಸಲಾಗಿದೆ.
ಬಿಹಾರದಿಂದ ಬಂದಿರುವ ಬಾಲಕಿಯ ಪೋಷಕರು ಹಾಗೂ ಆರೋಪಿ ಪ್ರವೀಣ್ ಅವರು ಪ್ಲೈವುಡ್ ಕಾರ್ಖಾನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಮಧ್ಯಾಹ್ನ ಪ್ರವೀಣ್ ಬಾಲಕಿಯನ್ನು ಪ್ಲೈವುಡ್ ಕಾರ್ಖಾನೆಯ ಹಿಂದೆ ಇರುವ ನಿರ್ಜನ ಸ್ಥಳಕ್ಕೆ ಚಾಕಲೇಟ್ ನೀಡಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಅವನು ಮತ್ತೆ ಕೆಲಸಕ್ಕೆ ಬಂದಾಗ, ಹುಡುಗಿಯ ತಾಯಿ ಮಗಳನ್ನು ಕೇಳಿದಾಗ, ಅವಳು ಎಲ್ಲವನ್ನೂ ಬಹಿರಂಗಪಡಿಸಿದಳು. ತಕ್ಷಣ ಹುಡುಗಿಯ ಪೋಷಕರು ಪ್ರವೀಣ್ ನನ್ನು ಹಿಡಿದು ಕಿರುಗಾವಲು ಪೊಲೀಸರಿಗೆ ತಿಳಿಸಿದರು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರು. ಕಿರುಗಾವಾಲು ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





