Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ನಾಗಮಂಗಲ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ: ಕುಟುಂಬಸ್ಥರ ಆಕ್ರೋಶ

ಮಂಡ್ಯ: ನಾಗಮಂಗಲದ ಬದ್ರಿಕೊಪ್ಪಲಿನ ಯುವಕರು ಗಣೇಶ ವಿಸರ್ಜನಾ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಬಂಧನಕ್ಕೊಳಗಾಗಿರುವ ಶ್ರೀನಿವಾಸ್‌ ಎಂಬ ಯುವಕನ ತಾಯಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮಗ ಗಲಾಟೆಯಾದ ಸಂದರ್ಭದಲ್ಲಿ ಅಲ್ಲಿ ಇಲ್ಲದಿದ್ದರೂ ಬಂಧಿಸಲಾಗಿದೆ.

ಅಂದು ಸಂಜೆ 6.45 ರಿಂದ ರಾತ್ರಿ 9.28ರವರೆಗೂ ನಮ್ಮ ಮನೆಯಲ್ಲಿ ಇದ್ದ. ಆದರೂ ಅವನನ್ನು ಬಂಧಿಸಲಾಗಿದೆ. ಮಧ್ಯರಾತ್ರಿ ಮನೆಗೆ ಬಂದು ಪೊಲೀಸರು ನನ್ನ ಮಗನನ್ನು ಬಂಧಿಸಿದ್ದಾರೆ.

ರಸ್ತೆಯುದ್ದಕ್ಕೂ ನನ್ನ ಮಗನಿಗೆ ಹೊಡೆದುಕೊಂಡೇ ಕರೆದುಕೊಂಡು ಹೋದರು ಎಂದು ಬೇಸರ ವ್ಯಕ್ತಪಡಿಸಿದರು. ಸಿಸಿ ಕ್ಯಾಮರಾ ದೃಶ್ಯವನ್ನು ನೋಡಿದರೂ ನನ್ನ ಮಗನನ್ನು ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಏನೂ ತಪ್ಪು ಮಾಡದ ನನ್ನ ಮಗನನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Tags: