ಮಂಡ್ಯ : ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿರುವ ಸುಭಾಷ್ ನಗರದ 223 ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕುಮಾರ ಅವರು ತಿಳಿಸಿದರು.
ಗುರುವಾರ ನಾಗಮಂಗಲದ ಸುಭಾಷ್ ನಗರ ಸ್ಲಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಸುಭಾಷ್ ನಗರ ಸ್ಲಂ ನಲ್ಲಿ ಈಗಾಗಲೇ ಕೊಳಚೆ ನಿರ್ಮೂಲನ ಮಂಡಳಿಯಿಂದ 223 ಮನೆ ನಿರ್ಮಾಣ ಮಾಡಲಾಗಿರುತ್ತದೆ. ಆದರೆ ಹಕ್ಕು ಪತ್ರ ವಿತರಣೆಯಾಗಿರುವುದಿಲ್ಲ. ಈ ಕುರಿತಂತೆ ಸರ್ವೆ ಕೆಲಸ ನಡೆಸಿ ವರದಿ ಪಡೆಯಲಾಗಿದ್ದು, ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.
ಶೀಘ್ರದಲ್ಲೇ 223 ಜನರಿಗೆ ಹಕ್ಕು ಪತ್ರ ವಿತರಿಸಿ 2010 ರಿಂದ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಇದ್ದ ತೊಡಕನ್ನು ನಿವಾರಿಸಲಾಗುವುದು ಎಂದು ತಿಳಿಸಿರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಆದರ್ಶ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





