ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಇಂದು (ಅಕ್ಟೋಬರ್ 18) ಮುಡಾ ಕಚೇರಿಯ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ನ್ಯಾಯಯುತ ಹಾಗೂ ಕಾನೂನು ಬದ್ಧವಾಗಿ ನಿವೇಶನಗಳನ್ನು ಪಡೆದಿದ್ದರೆ ಮುಡಾ 50:50 ಅನುಪಾತದ ನಿವೇಶನಗಳನ್ನು ವಾಪಾಸ್ ನೀಡುವ ಸನ್ನಿವೇಶವೇ ಬರುತ್ತಿರಲಿಲ್ಲ. ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಹಾಗಾಗಿ ನಿವೇಶನಗಳನ್ನು ಕೊಟ್ಟಿದ್ದಾರೆ. ಆ ನಿವೇಶನಗಳನ್ನು ತಿರುಗಿಸುವಾಗಲೇ ರುಜುವಾಗಿದೆ ಅವರಲ್ಲಿ ದೋಷವಿದೆ. ತಪ್ಪೇ ಮಾಡಿಲ್ಲವೆಂದರೆ ಯಾಕೆ ಎದುರಾಗಬೇಕು? ಎಂದು ಪ್ರಶ್ನಿಸಿದರು.
ನ್ಯಾಯಾಲಯಗಳಿಂದ ನ್ಯಾಯಯುತವಾಗಿ ತನಿಖೆಯಾಗಬೇಕೆಂದು ಆದೇಶಿಸಿದ್ದಾರೆ. ಆದರೆ, ಲೋಕಾಯುಕ್ತದಿಂದ ತನಿಖೆ ನಡೆದರೆ, ಸರ್ಕಾರದ ವಿರುದ್ಧವೇ ಅವರು ತನಿಖೆ ನಡೆಸಿ, ಸತ್ಯಾಂಶವನ್ನು ಹೇಳುತ್ತಾರೆ ಎಂಬುದು ಸಾಧ್ಯವೇ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆಯಾಗಬೇಕೆಂದರೆ ಇ.ಡಿ.ತನಿಖೆ ಅಗತ್ಯ ಎಂದು ಹೇಳಿದರು.