ಮಂಡ್ಯ: ಇಂದಿನಿಂದ ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಮಂಡ್ಯ ಎ.ಪಿ.ಎಂ.ಸಿ ಆವರಣ, ಕೆ.ಆರ್ ಪೇಟೆ ಎ.ಪಿ.ಎಂ.ಸಿ ಆವರಣ ಕಿಕ್ಕೇರಿ, ಎ.ಪಿ.ಎಂ.ಸಿ ಆವರಣ ಮದ್ದೂರು, ಸಂತೆ ಮೈದಾನ ಕೊಪ್ಪ, ಎ.ಪಿ.ಎಂ.ಸಿ ಆವರಣ ಮಳವಳ್ಳಿ, ರಾಜ್ಯ ಉಗ್ರಾಣ ನಿಗಮ ಆವರಣ ಯಲಿಯೂರು, ರಾಜ್ಯ ಉಗ್ರಾಣ ನಿಗಮ ಆವರಣ ಉಮ್ಮಡಹಳ್ಳಿ, ಎ.ಪಿ.ಎಂ.ಸಿ ಆವರಣ ನಾಗಮಂಗಲ, ಎ.ಪಿ.ಎಂ.ಸಿ ಆವರಣ ಪಾಂಡವಪುರ ಮತ್ತು ಟಿ.ಎ.ಪಿ.ಸಿ.ಎಂ.ಎಸ್ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.
ನೋಂದಣಿ ಪ್ರಕ್ರಿಯೆಯು ಜನವರಿ 31ರವರೆಗೆ ಚಾಲ್ತಿಯಲ್ಲಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.