ಮಂಡ್ಯ : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರು ಹಾಜರಾಗಿರುವ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಡಳಿತದಿಂದ ೫೦೦೦ ಗಣತಿದಾರರು, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ:-ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ : ಡಾ.ರಾಮಪ್ರಸಾತ್ ಮನೋಹರ್
ಸುಮಾರು ೧೨೦ ಸಿಬ್ಬಂದಿಗಳು ಗಣತಿ ಕಾರ್ಯಕ್ಕೆ ಹಾಜರಾಗಿರುವುದಿಲ್ಲ ಹಾಗೂ ೧೨೦ ಸಿಬ್ಬಂದಿ ವ್ಯಾಪ್ತಿಯಲ್ಲಿನ ಗಣತಿ ಕಾರ್ಯ ಪ್ರಾರಂಭಿಸಿರುವುದಿಲ್ಲ. ಇದರಿಂದ ಗಣತಿ ಕಾರ್ಯಕ್ಕೆ ತೊಂದರೆಯಾಗುತ್ತಿದ್ದು, ಹಾಜರಾಗದೇ ಇರುವ ಸಿಬ್ಬಂದಿಗಳು ಸೆ.೨೯ರಂದು ಬೆಳಿಗ್ಗೆ ೭ ಗಂಟೆಗೆ ತಮ್ಮ ವ್ಯಾಪ್ತಿಯ ತಹಸಿಲ್ದಾರ್ ಬಳಿ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಗೈರು ಹಾಜರಿಯ ಬಗ್ಗೆ ತಹಸಿಲ್ದ್ದಾರ್ ಕಚೇರಿಯಿಂದ ಮಾಹಿತಿ ಪಡೆದುಕೊಂಡು ಗೈರು ಹಾಜರಾಗುವವರನ್ನು ಅಮಾನತ್ತುಗೊಳಿಸಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





