Mysore
27
broken clouds
Light
Dark

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಮದ್ದೂರು: ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ತಾಲ್ಲೂಕಿನ ಚನ್ನೇಗೌಡನದೊಡ್ಡಿ ಬಳಿ ನಡೆದಿದೆ.

ತಾಲ್ಲೂಕಿನ ನಗರಕೆರೆ ಗ್ರಾಮದ ನಿಂಗಯ್ಯ ಅವರ ಪುತ್ರ ಎನ್.ಎಲ್. ಲಿಂಗೇಗೌಡ ಉ. ಕುಳ್ಳಯ್ಯ (48) ಎಂಬಾತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹಲವಾರು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಲಿಂಗೇಗೌಡ ನೋವನ್ನು ತಾಳಲಾರದೆ ಮನನೊಂದು ಗುರುವಾರ ರಾತ್ರಿ 7.30ರಲ್ಲಿ ಚನ್ನೇಗೌಡನ ದೊಡ್ಡಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಲಿಂಗೇಗೌಡರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದುಬಂದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಗೆ ಸಾಗಿಸಿ, ಶವ ಪರೀಕ್ಷೆ ನಂತರ ವಾರಸುದಾರರಿಗೆ ನೀಡಿದರು. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Disclaimer: ಯಾವುದೇ ಸಮಸ್ಯೆಗೂ ಅತ್ಮಹತ್ಯೆ ಒಂದೇ ಪರಿಹಾರವಲ್ಲ. ನಿಮ್ಮ ತೊಂದರೆಗಳನ್ನು ಆತ್ಮೀಯರ ಜತೆ ಹಂಚಿಕೊಳ್ಳಿ. ಇಲ್ಲವಾದರೆ ಈ ಸಹಾಯವಾಣಿಗೆ ಕರೆಮಾಡಿ ಮಾತನಾಡಿ: 9152987821

Tags: