Mysore
21
overcast clouds
Light
Dark

Loksabha Election Results 2024: ಮಂಡ್ಯದಲ್ಲಿ ಹೆಚ್‌ಡಿಕೆಗೆ 21000 ಮತಗಳ ಮುನ್ನಡೆ

ಮಂಡ್ಯ: ಇಂದು ( ಜೂನ್‌ 4 ) ದೇಶಾದ್ಯಂತ ಲೋಕಸಭೆ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಾರಿ ಯಾವ ಬಣ ಮ್ಯಾಜಿಕ್‌ ನಂಬರ್‌ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಕುತೂಹಲ ಮೂಡಿದ್ದು, ಎಲ್ಲರ ಚಿತ್ತ ಮತಎಣಿಕೆಯತ್ತ ನೆಟ್ಟಿದೆ.

ಇನ್ನು ಈ ಬಾರಿಯೂ ಭಾರೀ ಸದ್ದು ಮಾಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬೆಳಗ್ಗೆ 9.05ರ ಸಮಯಕ್ಕೆ ಕುಮಾರಸ್ವಾಮಿ 21,369 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಈ ಸಮಯಕ್ಕೆ ಕುಮಾರಸ್ವಾಮಿ 54783  ಮತಗಳನ್ನು ಪಡೆದುಕೊಂಡಿದ್ದರೆ, ವೆಂಕಟರಮಣೇಗೌಡ 33414 ಮತಗಳನ್ನು ಪಡೆದುಕೊಂಡಿದ್ದಾರೆ.