Mysore
27
broken clouds

Social Media

ಶನಿವಾರ, 16 ಮೇ 2026
Light
Dark

ಮತ್ತೊಂದು ದಾಖಲೆ ಬರೆದ ಕೆಆರ್‌ಎಸ್‌ ಜಲಾಶಯ

ಮಂಡ್ಯ: ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಡ್ಯಾಂ ದಾಖಲೆಯ ಮೈಲಿಗಲ್ಲುಗಳನ್ನು ತಲುಪುತ್ತಿದೆ. ಅದೇ ರೀತಿ ಇದೀಗ ಕೆಆರ್‌ಎಸ್‌ ಅಣೆಕಟ್ಟೆ ಮತ್ತೊಂದು ದಾಖಲೆಯ ಸಾಕ್ಷಿಯಾಗಿದೆ.

ಕೆಆರ್‌ಎಸ್‌ ಅಣೆಕಟ್ಟೆ ಬರೋಬ್ಬರಿ 150 ದಿನಗಳ ಕಾಲ ಗರಿಷ್ಠ ಮಟ್ಟವನ್ನು ಕಾಯ್ದಿರಿಸಿಕೊಳ್ಳುವ ಮೂಲಕ ನೂತನ ದಾಖಲೆ ಬರೆದಿದೆ. ಈ ಬಾರಿ ಕೃಪಾಕಟಾಕ್ಷದಿಂದ ಜೂನ್‌ ತಿಂಗಳಲ್ಲೇ ಕನ್ನಂಬಾಡಿ ಕಟ್ಟೆ ದಾಖಲೆ ಬರೆದಿತ್ತು. ಇದೀಗ ಅಂತಹದ್ದೆ ದಾಖಲೆಯನ್ನು ನಿರ್ಮಾಣ ಮಾಡಿದೆ.

124.80 ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್‌ ಅಣೆಕಟ್ಟೆ ಕಳೆದ 150 ದಿನಗಳಿಂದಲೂ ಅದೇ ಮಟ್ಟವನ್ನು ಕಾಯ್ದಿರಿಸಿಕೊಂಡಿದೆ.

Tags:
error: Content is protected !!