Mysore
23
broken clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಡಿಕೆಶಿ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ: ಶಾಸಕ ಗಣಿಗ ರವಿಕುಮಾರ್‌

ಮಂಡ್ಯ: 2028ಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಹಾಗಾಗಿ ಹೈಕಮಾಂಡ್‌ ಮಧ್ಯಪ್ರವೇಶಿಸಿ ಕುರ್ಚಿ ಗೊಂದಲ ಬಗೆಹರಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್‌ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಮಗೆ ಸಿಎಂ, ಡಿಸಿಎಂ ಎಲ್ಲಾ ಒಂದೇ. ನಾನು ಸಿಎಂ ಪರಾನೂ ಇದ್ದೀನಿ. ಡಿಸಿಎಂ ಪರಾನೂ ಇದ್ದೀನಿ. 136 ಶಾಸಕರು ಸಿಎಂ, ಡಿಸಿಎಂ ಪರ ಇದ್ದಾರೆ. ಆದರೆ ಡಿಕೆಶಿ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ ಎಂದು ಹೇಳಿದರು.

ಪ್ರತಿದಿನ ಡಿಕೆ ಸಿಎಂ ಆಗ್ತಾರೆ, ಆಗಲ್ಲ ಅನ್ನೋ ಗೊಂದಲ ಎಳೆದುಕೊಂಡು ಹೋಗುತ್ತದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಲಿದೆ. ಹಾಗಾಗಿ ಹೈಕಮಾಂಡ್‌ ಒಂದು ನಿರ್ಧಾರ ಮಾಡಲಿ ಅನ್ನೋದು ನಮ್ಮೆಲ್ಲರ ಬೇಡಿಕೆ ಎಂದರು.

 

Tags:
error: Content is protected !!