ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ೩ ತಿಂಗಳನಂತರ ೧೧ ಹುಂಡಿಗಳನ್ನು ಬಿಚ್ಚಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಅವರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.
ಹುಂಡಿಗಳಲ್ಲಿ ಭಾರತದ ರೂಪಾಯಿಗಳಲ್ಲದೆ, ಅಮೇರಿಕಾ, ಕೆನಡಾ, ಇಂಡೋನೇಷಿಯಾ, ಮಲೇಷಿಯಾ, ಯುರೋಪ್ ವಿದೇಶಿಯ ಹಣವೂ ಬಂದಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್ ಮೇನೇಜರ್ ಹರ್ಷ ಮತ್ತು ೬೫ ಜನ ಸಿಬ್ಬಂದಿ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಹಾಕಲಾಯಿತು.





