ಮಂಡ್ಯ : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಪಾಂಡವಪುರದ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಈ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ್ದರು.
ಪಾಂಡವಪುರ ಕ್ರೀಡಾಂಗಣ ಸಮೀಪ ಬೃಹತ್ ವೇದಿಕೆ ನಿರ್ಮಿಸಿದ್ರೆ, ವೇದಿಕೆ ಪಕ್ಕದ ಖಾಸಗಿ ಸಮುದಾಯ ಭವನದಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಂದಿದ್ದ ಕುಮಾರಣ್ಣನ ಅಭಿಮಾನಿಗಳು ಭರ್ಜರಿ ಬಾಡೂಟ ಸವಿದರು. ಬರೋಬ್ಬರಿ ೫ ಟನ್ ಮಟನ್ , ೨,೫ ಟನ್ ಚಿಕನ್ , ಬೋಟಿ, ೧ ಲಕ್ಷ ಮೊಟ್ಟೆಯಿಂದ ಬಗೆ ಬಗೆಯ ಪದಾರ್ಥಗಳನ್ನ ತಯಾರಿಸಲಾಗಿತ್ತು.