ದರ್ಶನ್‌ ಕೊಲೆ ಪ್ರಕರಣ: ಮಂಡ್ಯ ರೈತರ ಬೃಹತ್‌ ಪ್ರತಿಭಟನೆ

ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿದಂತೆ 13 ಜನ ಆರೋಪಿಗಳನ್ನು ಬಂಧಿಸಿ ಅನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇತ್ತ ಮಂಡ್ಯದ ಮಗ ಎಂದೇ ಖ್ಯಾತಿಯಾಗಿರುವ ದರ್ಶನ್‌ ವಿರುದ್ಧ ಮಂಡ್ಯದ ರೈತರೆಲ್ಲರೂ ಮುಗಿಬಿದ್ದಿದ್ದಾರೆ.

ಮಂಡ್ಯದ ಸಂಜಯ್‌ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆಯವರೆಗೆ ಕರ್ನಾಟಕ ರಾಜ್ಯ ರೈತ ಸಂಘ ರ್ಯಾಲಿ ನಡೆಸಿ ನಟ ದರ್ಶನ್‌ಗೆ ಶಿಕ್ಷೆ ಆಗುವಂತೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ 420, ಕೊಲೆಗಡುಕ ದರ್ಶನ್‌ಗೆ ಗಲ್ಲು ಶಿಕ್ಷೆಯಾಗುವ ವರೆಗೂ ಹೋರಾಟ ಮಾಡಲಾಗುವುದು ಎಂದು ಬ್ಯಾನರ್‌, ನಾಮ ಫಲಕಗಳನ್ನು ಹಿಡಿದು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಪ್ರತಿಭಟನೆ ನಡೆಸಿದರು.

ಇತ್ತ ಚನ್ನಪಟ್ಟಣದಲ್ಲಿಯೂ ಸಹಾ ಡಾ. ರಾಜ್‌ಕುಮಾರ್‌ ಅಭಿಮಾನಿ ಬಳಗದಿಂದ ಬೃಹತ್‌ ಪ್ರತಿಭಟನೆ ನಡೆಯಿತು. ದರ್ಶನ್‌ ಸೇರಿದಂತೆ ಇತರೆ ಕನ್ನಡ ನಾಯಕ ನಟರು ಡಾ. ರಾಜ್‌ಕುಮಾರ್‌ ಆದರ್ಶ ಪಾಲಿಸಬೇಕು. ಕೇವಲ ಹಣಕ್ಕಾಗಿ ಕಲಾವಿದರಾಗುವುದು ಬೇಡ. ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.