Mysore
29
broken clouds
Light
Dark

ಮಂಡ್ಯ: ಆರೋಗ್ಯ ಇಲಾಖೆ ಕ್ವಾರ್ಟರ್ಸ್‌ನಲ್ಲಿ ಭ್ರೂಣಲಿಂಗ ಪತ್ತೆ

ಮಂಡ್ಯ: 2023ರ ಡಿಸೆಂಬರ್‌ನಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಮಂಡ್ಯದಲ್ಲಿ ಅತಿದೊಡ್ಡ ಭ್ರೂಣಲಿಂಗ ಹತ್ಯೆ ಜಾಲವನ್ನು ಭೇದಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲಿ ಮತ್ತೊಂದು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಜಾಲವೊಂದು ಪತ್ತೆಯಾಗಿದೆ.

ಜಿಲ್ಲೆಯ ಪಾಂಡವಪುರ ಆರೋಗ್ಯ ಇಲಾಖೆಯ ಕಾರ್ಟರ್ಸ್‌ನಲ್ಲಿಯೇ ಭ್ರೂಣಲಿಂಗ ಹತ್ಯೆಗೆ ತಯಾರಿ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಅರವಿಂದ್‌ ಹಾಗೂ ಪೊಲೀಸರ ತಂಡದ ಜಂಟಿ ಕಾರ್ಯಾಚರಣೆಯಿಂದ ಈ ಜಾಲ ಭೇದಿಸಿದ್ದಾರೆ.

ಮೈಸೂರು ಮೂಲದ ಮಹಿಳೆಯೊಬ್ಬರು ಗರ್ಭಪಾತಕ್ಕೆ ಆಗಮಿಸಿದ್ದ ವೇಳೆ ಕ್ವಾರ್ಟ್‌ರ್ಸ್‌ಗೆ ದಾಳಿ ನಡೆಸಿದ ಜಂಟಿ ತಂಡ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಗರ್ಭಪಾತದ ಯೋತ್ರೋಪಕರಣಗಳು ಜತೆಗೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ
ಪಾಂಡವಪುರ ತಾಲೂಕು ಆಸ್ಪತ್ರ ಆಂಬುಲೆನ್ಸ್‌ ಚಾಲಕ ಆನಂದ್‌, ಹೊರಗುತ್ತಿಗೆ ಡಿ ಗ್ರೂಪ್‌ ಸಿಬ್ಬಂದಿ ಅಶ್ವಿನಿ ಮತ್ತು ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.