ಮಂಡ್ಯ : ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ವಿಸಿ ಫಾರಂ ಆವರಣದಲ್ಲಿ ಕೃಷಿ ಪ್ರಾತ್ಯಕ್ಷೆಗಳು ನೋಡುಗರ ಕಣ್ಮನ ಸೆಳೆದವು.
ಕರ್ನಾಟಕದಲ್ಲಿ ಒಟ್ಟು ೧೮೦ ದೇಶಿ ಭತ್ತದ ತಳಿಗಳಿವೆ. ೧೮೦ ಭತ್ತದ ತಳಿಗಳನ್ನು ವಿಸಿ ಫಾರಂನಲ್ಲಿ ಬೆಳೆಸಲಾಗಿದೆ. ಜಿಂಕ್ ಮತ್ತು ಐರನ್ ಅಂಶಗಳು ಹೆಚ್ಚು ಇರುವ ಭತ್ತದ ತಳಿಗಳು ಇಲ್ಲಿವೆ. ಫಿಲಿಪೈನ್ಸ್ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮ ಹವಾಮಾನಕ್ಕೆ ಸರಿಹೊಂದುವ ಭತ್ತದ ತಳಿಗಳನ್ನು ಬೆಳೆಸಲಾಗುವುದು ಹಾಗೂ ಈ ಭತ್ತದವನ್ನು ಸಕ್ಕರೆ ಖಾಯಿಲೆ ಇರುವವರು ಕೂಡ ತಿನ್ನ ಬಹುದಾಗಿದೆ.
೧೮ ದೇಶಿ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಇವುಗಳಿಂದ ಧಾನ್ಯದ ಇಳುವರಿ ಹಾಗೂ ಬೇವಿನ ಇಳುವರಿ ಹೆಚ್ಚು ನಿರೀಕ್ಷಿಸಬಹುದು. ಸಾವಯವ ಕೃಷಿಯಿಂದ ರಾಗಿ, ಕಬ್ಬು, ಸೂರ್ಯಕಾಂತಿ, ಕಡಲೆಕಾಯಿ, ಸೋಯಾಬಿನ್, ಉದ್ದು, ಹೆಸರುಕಾಳು, ಗೋರಿ ಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ ಬೆಳೆಯಲಾಗಿದೆ.
ಇದನ್ನೂ ಓದಿ:-ಮೋದಿ-ಪುಟಿನ್ ಮಾತುಕತೆ : ರಕ್ಷಣಾ ಒಪ್ಪಂದಗಳ ಬಗ್ಗೆ ಚರ್ಚೆ
ಆಕರ್ಷಿಸಿದ ಕಸಿ ಟೊಮೊಟೊ ಬದನೆಕಾಯಿ ಗಿಡ
ಕೃಷಿ ವಿಜ್ಞಾನಿಗಳ ಮಂಡ್ಯ ವಿ.ಸಿ. ಫಾರಂ ಆವರಣದಲ್ಲಿ ಬೆಳೆಸಲಾದ ಕಸಿ ಟೊಮೋಟೊ ಮತ್ತು ಬದನೆಕಾಯಿ ಒಂದೇ ಗಿಡದಲ್ಲಿ ಟೊಮೋಟೊ ಮತ್ತು ಬದನೆಕಾಯಿ ಬಿಟ್ಟಿದ್ದು, ಇದು ನೋಡುಗರನ್ನು ಆಕರ್ಷಿಸುತ್ತದೆ. ವಿವಿಧ ಅಲಂಕಾರ ಹೂಗಳನ್ನು ವಿ.ಸಿ.ಫಾರಂನಲ್ಲಿ ಬೆಳೆಯಲಾಗಿದೆ.





