Mysore
25
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಅಮೆರಿಕದಲ್ಲಿ ಮಂಡ್ಯದವರ ಸಾಂಸ್ಕೃತಿಕ ಕಲರವ

Cultural diversity of Mandya people in America

ಮಂಡ್ಯ : ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಪದವಿ ಪಡೆದು ದೇಶದ ವಿವಿಧೆಡೆ ನೆಲೆಸಿರುವವರ ಬೃಹತ್ ಸಂಗಮ. ನೃತ್ಯ, ನಾಟಕ, ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಎಲ್ಲರೂ ಸಂಭ್ರಮಿಸಿದರು. ಅಮೆರಿಕದ ಒಕ್ಕಲಿಗರ ಪರಿಷತ್ತಿನ 18ನೇ ಸಮಾವೇಶ ಹಾಗೂ ವಿಶ್ವ ಒಕ್ಕಲಿಗರ ಸಮ್ಮೇಳನ ಕ್ಯಾಲಿಫೋರ್ನಿಯಾದ ಸಾನ್ಹೋಸೆ ಕನ್ವೆನ್ಷನ್ ಸೆಂಟರ್‌ನಲ್ಲಿ ಕಂಡುಬಂದ ಕಾರ್ಯಕ್ರಮವಿದು.

ಈ ಆಚರಣೆಯ ಭಾಗವಾಗಿ ಒಕ್ಕಲಿಗರ ಪರಿಷತ್ ವತಿಯಿಂದ 1967 ರಿಂದ 2000ನೇ ಇಸವಿಯವರೆಗೆ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದವರಿಗಾಗಿ ಅಲ್ಯುಮ್ನಿ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹಳೆಯ ಗೆಳೆಯರು ಪರಸ್ಪರ ಒಂದೇ ವೇದಿಕೆಯಲ್ಲಿ ಸಂಗಮಗೊಂಡರು. ತಮ್ಮ ಸಾಧನೆಗಳು ಮತ್ತು ಅನುಭವಗಳನ್ನು ಹಂಚಿಕೊಂಡು ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಿದರು.

ಈ ಸಮಾವೇಶದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಸಿ.ಎಸ್.ಪುಟ್ಟರಾಜು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರವಿಶಂಕರ್‌ಗೌಡ, ಶ್ರೀ ಹರ್ಷ, ಹೇಮಂತ್‌ಕುಮಾರ್, ಹರಿಕೃಷ್ಣ ಮತ್ತು ಎಂ.ಡಿ.ಪಲ್ಲವಿ ಮೊದಲಾದ ಖ್ಯಾತ ನಟರು ಹಾಗೂ ಗಾಯಕರು ಭಾಗವಹಿಸಿದ್ದರು.

ಪ್ರಕೃತಿ ಸ್ವಾಮಿಗೌಡ, ಭಾಗ್ಯ, ಚೇತನ ಕುಮಾರ್, ಸಂಧ್ಯಾ, ಸಿಂಧು ಶಿವ, ಸಚಿನ್, ಎ.ಆರ್.ಮಮತಾ, ನಮಿತಾ, ಎಲ್.ಮಹೇಶ್, ಪ್ರವೀಣ್, ಮಾದೇಶ್, ಶಿವಾನಂದ, ರವಿ, ರಶ್ಮಿ, ರಮೇಶ್, ನವೀನ್, ವಿದ್ಯಾ, ಮಂಜುನಾಥ, ಮುರಳೀಧರ್, ವೆಂಕಟೇಶ್, ಶ್ರೀವಲ್ಲಿ, ಶೇಷಾದ್ರಿ, ಕೆ.ಎನ್.ಯದುಷ್, ಕೆ.ಎಸ್.ಮಮತಾ ಅವರೆಲ್ಲರೂ ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳಾಗಿ ಸವಿನೆನಪುಗಳನ್ನು ಹಂಚಿಕೊಂಡರು.

Tags:
error: Content is protected !!