Mysore
23
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಶುದ್ದ ಕುಡಿಯುವ ನೀರಿನ ಘಟಕ | ಗುತ್ತಿಗೆ ಅವಧಿ ಮುಗಿದರು ಹಸ್ತಾಂತರ ಮಾಡದೆ ಅಕ್ರಮ : ಆರೋಪ

ಮಂಡ್ಯ : ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 75 ಶುದ್ದ ಕುಡಿಯುವ ನೀರಿನ ಘಟಕಗಳ ಖಾಸಗಿ ಗುತ್ತಿಗೆ ಅವಧಿ ಮುಗಿದು 4 ತಿಂಗಳಾದರೂ ಗ್ರಾಮ ಪಂಚಾಯಿತಿಗಳಿಗೆ ವಹಿಸದೇ ಅಕ್ರಮ ಎಸಗಲಾಗಿದೆ ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್ ಬೂಸ ದೂರಿದ್ದಾರೆ.

ಈ ಕುರಿತು ದಾಖಲೆ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಅವರು, 2020ರ ಫೆ.14ರಂದು 5 ವರ್ಷಗಳ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯವರು 2025ರ ಫೆ.15 ಕ್ಕೆ ಅವಧಿ ಮುಗಿದರೂ ಗ್ರಾಮ ಪಂಚಾಯಿತಿಗಳಿಗೆ ಘಟಕ ಹಸ್ತಾಂತರಿಸದೇ ಅಕ್ರಮ ಎಸಗಿದ್ದಾರೆ‌. ಇದರಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು ತನಿಖೆ ನಡೆಸಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ವಹಿಸುವಂತೆ ಜಿಪಂ ಸಿಇಒ ಅವರನ್ನು ಒತ್ತಾಯಿಸಿದ್ದಾರೆ.

ಮಂಡ್ಯ ತಾಲ್ಲೂಕಿನ 30 ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 45 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಸ್ತಾಂತರಿಸದೆ ಅಕ್ರಮ ಎಸಗಲಾಗಿದೆ. ಅ ಮೂಲಕ ಲಕ್ಷಾಂತರ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರು.

ಇದೇ ರೀತಿ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಶುದ್ದ ನೀರಿನ ಘಟಕಗಳನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಅಲ್ಲೂ ಕೂಡ ಅವಧಿ ಮುಗಿದ ಬಳಿಕ ಗ್ರಾಮ ಪಂಚಾಯಿತಿಗಳಿಗೆ ಘಟಕ ಹಸ್ತಾಂತರಿಸದೆ ಅಕ್ರಮ ಎಸಗಲಾಗಿದೆ.

ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಶುದ್ದ ಕುಡಿಯುವ ನೀರಿನ ಘಟಕಗಳಿಂದ ಕಳೆದ 4 ತಿಂಗಳಿನಿಂದ ಲಕ್ಷಾಂತರ ರೂ. ಗಳನ್ನು ಗುತ್ತಿಗೆದಾರ ಪಡೆದು ವಂಚಿಸಿದ್ದಾನೆ‌. ಅದರಲ್ಲಿ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಕ್ರಮ ವಹಿಸಿ ಘಟಕಗಳ ಹಸ್ತಾಂತರ ಪಡೆಯದಿದ್ದಲ್ಲಿ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದ್ದಾರೆ‌.

Tags:
error: Content is protected !!