Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳಿಂದ ಬಾಲಕಿ ಕರೆದೊಯ್ದ ಪ್ರಕರಣ: ಎಫ್‌ಐಆರ್‌ ದಾಖಲು

ಮಂಡ್ಯ: ಲೋನ್‌ ಕಟ್ಟುವುದು ತಡವಾಗಿದ್ದಕ್ಕೆ ಮಗುವನ್ನು ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಬೆಳಕವಾಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳಿಂದ ಬಾಲಕಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್‌ 2023, 137, 352 ರ ಅಡಿ ದೂರು ದಾಖಲಾಗಿದೆ.

ಬಾಲಕಿ ತಂದೆ ನವೀನ್‌ ಟಿ.ನರಸೀಪುರದ ಬಜಾಜ್‌ ಮೈಕ್ರೋ ಫೈನಾನ್ಸ್‌ನ ಅಜಿತ್‌ ಹಾಗೂ ಮ್ಯಾನೇಜರ್‌ ವಿರುದ್ಧ ಕೊಟ್ಟ ದೂರಿನನ್ವಯ ಎಫ್‌ಐಆರ್‌ ದಾಖಲಾಗಿದೆ.

Tags:
error: Content is protected !!