Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ : ಡಾ.ರಾಮಪ್ರಸಾತ್ ಮನೋಹರ್

ಮಂಡ್ಯ : ಈ ಬಾರಿಯ ಶ್ರೀರಂಗಪಟ್ಟಣ ದಸರಾದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಾವೇರಿ ಆರತಿ ಕಾರ್ಯಕ್ರಮ, ಈಗ ಸಾಹಸ ಹಾಗೂ ಜಲ ಕ್ರೀಡೆಗಳನ್ನು ಒಳಗೊಂಡು ಪ್ರವಾಸೋದ್ಯಮಕ್ಕೆ ಹೊಸ ಹೊನಲು ತಂದಿದೆ ಎಂದು ಕಾವೇರಿ ಆರತಿ ಸಮಿತಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಸಲ್ಲಿಸುವ ಧಾರ್ಮಿಕ ಆರತಿ ಸಮಾರಂಭದ ಜೊತೆಗೆ, ರಾಫ್ಟಿಂಗ್ ಸೇರಿದಂತೆ ಹಲವಾರು ಜಲ ಕ್ರೀಡೆಗಳು ಪ್ರವಾಸಿಗರಿಂದ ಅಪಾರ ಪ್ರತಿಕ್ರಿಯೆ ಪಡೆಯುತ್ತಿವೆ. ಸಾಹಸ ಕ್ರೀಡೆಗಳು ಯುವಕರಿಗೆ ಹೊಸ ಉತ್ಸಾಹ ನೀಡುತ್ತಿದರೆ, ಜಲಕ್ರೀಡೆಗಳು ಕುಟುಂಬ ಸಮೇತರಾಗಿ ಬರುವವರಿಗೆ ವಿಶೇಷ ಅನುಭವ ನೀಡುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ:-ಕಾಲ್ತುಳಿತ | ‌ ನಟ ವಿಜಯ್ ತಪ್ಪಿಲ್ಲ, ಡಿಎಂಕೆ ಸರ್ಕಾರ ದೂಷಿಸಿದೆ ಬಿಜೆಪಿ ; ಪರಿಹಾರ ಘೋಷಣೆ

ಕೆಆರ್‌ಎಸ್‌ನಲ್ಲಿ ನಡೆಯುತ್ತಿರುವ ಜಲಕ್ರೀಡೆಗಳಿಗೆ ಪ್ರವಾಸಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಹಸ, ಮನರಂಜನೆ ಮತ್ತು ಸಂಸ್ಕೃತಿಯ ಸಂಯೋಜನೆಯಿಂದ ಕೆಆರ್‌ಎಸ್ ಪ್ರವಾಸೋದ್ಯಮದ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಮಕ್ಕಳಿಗಾಗಿ ಸುಮಾರು ೮೦ ಆಟಗಳನ್ನು ಪರಿಚಯಿಸಲಾಗಿದ್ದು, ಎಲ್ಲ ವಯಸ್ಸಿನ ಪ್ರವಾಸಿಗರು ತಮ್ಮ ರುಚಿಗೆ ತಕ್ಕ ಅನುಭವ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.

ಹೀಗಾಗಿ ಪ್ರವಾಸಿಗರು ಹಾಗೂ ರಾಜ್ಯದ ಜನ ಈ ವಾರಾಂತ್ಯದಲ್ಲಿ ಕೆಆರ್‌ಎಸ್‌ಗೆ ಆಗಮಿಸಿ ನೂತನ ರೀತಿಯ ಈ ಆಕರ್ಷಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಮನೋಹರ್ ಅವರು ಕರೆ ನೀಡಿದ್ದಾರೆ.

Tags:
error: Content is protected !!