ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮೀನುಗಾರನೊಬ್ಬ ದೋಣಿ ಮುಗುಚಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಾರೇಹಳ್ಳಿ ಕೆರೆಯಲ್ಲಿ ನಡೆದಿದೆ.
ಮಾರೇಹಳ್ಳಿಯ ಗಂಗಾಮತ ಬೀದಿಯ ನಾಗರಾಜು ಎಂಬುವವರೇ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಭಾನುವಾರ ರಾತ್ರಿ ಮಾರೇಹಳ್ಳಿ ಕೆರೆಗೆ ಮೀನು ಹಿಡಿಯುವುದಕ್ಕೆ ಸಹಪಾಠಿಗಳೊಂದಿಗೆ ಬಲೆ ಹಾಕಲು ಹೋಗಿದ್ದು, ಬಲೆಹಾಕುವ ವೇಳೆ ಆಯತಪ್ಪು ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.