Mysore
21
overcast clouds
Light
Dark

ಮಂಡ್ಯ : ರಾತ್ರೋರಾತ್ರಿ ಗಂಧದ ಮರ ಕದ್ದೊಯ್ದ ಕಳ್ಳರು

ಮಂಡ್ಯ: ಕಳ್ಳರು ರಾತ್ರೋರಾತ್ರಿ ಗಂಧದಮರಗಳನ್ನು ಕದ್ದಿರುವ ಘಟನೆ ನಗರದ ಚಾಮುಂಡೇಶ್ವರಿ ನಗರದ 22 ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲೆಯಲ್ಲಿ ಘಟನೆ.

ಶಾಲಾ ಆಡಳಿತ ಮಂಡಳಿ ಆವರಣದಲ್ಲಿ ಬೆಳೆಸಿದ್ದ ಸುಮಾರು 5 ಗಂಧದ ಮರಗಳನ್ನು ತಡರಾತ್ರಿ ಶಾಲೆಗೆ ಲಗ್ಗೆ ಇಟ್ಟ 5 ರಿಂದ 6 ಜನ ಕಳ್ಳರು ಕದ್ದೊಯ್ದಿದ್ದಾರೆ. ಏಕಾಏಕಿ ಶಾಲಾ ಆವರಣಕ್ಕೆ ನುಗ್ಗಿದ ಕಳ್ಳರು ಕಾವಲುಗಾರರನ್ನು ಬೆದರಿಸಿ ಗಂಧಧ ಮರಗಳನ್ನು ಕಳವು ಮಾಡಿದ್ದಾರೆ.

ಸುಮಾರು 10 ವರ್ಷ ವಯಸ್ಸಿನ ಮರಗಳು ಕಳ್ಳರ ಪಾಲಾಗಿದ್ದು, ಮರಗಳ ಕಳ್ಳತನ ಕುರಿತು ಮಂಡ್ಯದ ಪಶ್ಚಿಮ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.