Mysore
26
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಮಲೆಮಹದೇಶ್ವರನಿಗೆ ಇನ್ಮುಂದೆ ಆನ್ ಲೈನ್ ಮೂಲಕವೂ ಕಾಣಿಕೆ ಸಲ್ಲಿಸಬಹುದು!

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಇ ಹುಂಡಿಯನ್ನು ತೆರೆದು ಅನುಕೂಲ ಕಲ್ಪಿಸಲಾಗಿದೆ.  ಮಲೆಮಾದೇಶ್ವರ ಬೆಟ್ಟದ ಮುಖ್ಯ ದೇವಾಲಯ ಹಾಗೂ ಇನ್ನಿತರ ಕಡೆ ಹುಂಡಿ (ಗೋಲಕ )ಇಡಲಾಗಿತ್ತು ಇದರಿಂದ ಭಕ್ತಾದಿಗಳು ತಮ್ಮ ಹರಕೆ ಕಾಣಿಕೆಗಳನ್ನು ಹುಂಡಿಯಲ್ಲೇ ಹಾಕಬೇಕಿತ್ತು.

ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲೆಮಹದೇಶ್ವರ ಬೆಟ್ಟ ಶಾಖೆ ಅಧಿಕಾರಿಗಳ ಸಹಕಾರದೊಂದಿಗೆ ದೇವಾಲಯದ ಪ್ರಮುಖ ಕಡೆಗಳಲ್ಲಿ ಇ ಹುಂಡಿ ತೆರೆಯಲಾಗಿದೆ. ಇದರಿಂದ ಭಕ್ತಾದಿಗಳು ಆನ್ಲೈನ್ ಪಾವತಿ ಮಾಡುವ ಮೂಲಕ ಹರಕೆ ಕಾಣಿಕೆ ಸಲ್ಲಿಸಬಹುದಾಗಿದೆ.  ಮಲೆಮಾದೇಶ್ವರ ಗರ್ಭ ಗುಡಿ ಆವರಣದಲ್ಲಿ ಇ ಹುಂಡಿ ಇಡುವ ಮೂಲಕ (ಆನ್ ಲೈನ್ ಪೇಮೆಂಟ್) ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಬಸವರಾಜು ಲೆಕ್ಕಾಧೀಕ್ಷಕ ಪ್ರವೀಣ್ ಪಾಟೀಲ್ ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ ಪಾರುಪತ್ತೇದಾರ ಮಲ್ಲಿಕಾರ್ಜುನ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!