ಸಿದ್ದಾಪುರ: ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ.
ಪಾಲಿಬೆಟ್ಟ ಸಮೀಪ ಟಾಟಾ ಕಾಫಿ ಕಂಪನಿಗೆ ಸೇರಿದ ಎಮ್ಮೆ ಗುಂಡಿ ಎಸ್ಟೇಟ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಅಲ್ಲಿನ ನಿವಾಸಿ ಚೆಲ್ಲಮೇಸ್ತ್ರಿ (55) ಎಂಬುವವರೇ ಕಾಡಾನೆಯ ಲಗ್ಗೆಯಿಂದಾಗಿ ಪ್ರಾಣ ಕಳೆದುಕೊಂಡ ನತದೃಷ್ಟ ವ್ಯಕ್ತಿಯಾಗಿದ್ದಾರೆ.





