ಕೊಡಗು: ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಅಧಿಕವಾಗುತ್ತಿರುವಾಗಲೇ ನಾಪೋಕ್ಲು ವ್ಯಾಪ್ತಿಯ ಎಮ್ಮೆಮಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಅಲಿಕಲ್ಲು ಮಳೆ ಸುರಿದು ಕಾದ ಭೂಮಿಗೆ ತಂಪೆರೆದಿದೆ.
ನಾಪೋಕ್ಲು ವ್ಯಾಪ್ತಿಯ ಎಮ್ಮೆಮಾಡು, ಪಡಿಯಾಣಿ, ನೆಲಜಿ, ಬಲ್ಲಮಾವಟಿ ಗ್ರಾಮ ವ್ಯಾಪ್ತಿಯಲ್ಲಿ ಇಂದು ಒಂದು ಗಂಟೆಗೂ ಅಧಿಕ ಸಮಯ ಮಳೆ ಸುರಿದು ಕಾದ ಭೂಮಿಗೆ ತಂಪೆರಿದಿದೆ.
ಜಿಲ್ಲೆಯ ಹಲವು ಕಡೆ ಕಾಫಿ ಕೊಯ್ಲು ಕಾರ್ಯ ಪೂರ್ಣಗೊಂಡು ಬೆಳೆಗಾರರು ಹೂಮಳೆಗಾಗಿ ಕಾತೊರೆಯುತ್ತಿರುವಾಗಲೇ ಮಳೆ ಸುರಿದಿರುವುದು ಸಂತಸ ತಂದಿದೆ.
ಎಮ್ಮೆಮಾಡು ವ್ಯಾಪ್ತಿಯಲ್ಲೂ ಕಳೆದ ವಾರ ಒಂದು ಇಂಚಿಗೂ ಅಧಿಕ ಮಳೆ ಸುರಿದಿತ್ತು. ಇಂದು ಕೂಡ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಇಂದು ಸುರಿದ ಮಳೆ ಜನರ ಸಮಸ್ಯೆಯನ್ನು ಬಗೆಹರಿಸದಿದ್ದರೂ ಜನರಲ್ಲಿ ಮುಂದೆ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿಸಿದೆ.