Mysore
23
clear sky

Social Media

ಗುರುವಾರ, 16 ಏಪ್ರಿಲ 2026
Light
Dark

ಸೋಮವಾರಪೇಟೆ: ಹಿರಿಕರ ಗ್ರಾಮದಲ್ಲಿ ಮಳೆಗಾಗಿ ದೇವರ ಮೊರೆ

ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹಿರಿಕರ ಗ್ರಾಮದ ಕೃಷಿಕರು, ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಲಂಬಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದ ಮಳೆಮಲ್ಲೇಶ್ವರ ಹಾಗು ಬಸವಣ್ಣ ದೇವರಿಗೆ ಸಾಮೂಹಿಕ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು.

ಅರೇಬಿಕಾ ಕಾಫಿ ತೋಟಗಳಿಗೆ ಅಲ್ಪ ಸ್ವಲ್ಪ ಮಳೆ ಬಿದ್ದ ಪರಿಣಾಮ ಶೇ.೫೦ರಷ್ಟು ಕಾಫಿ ಬ್ಲಾಸಂ ಆಗಿದೆ. ಈ ಸಂದರ್ಭದಲ್ಲಿ ಮಳೆ ಬಿದ್ದರೆ, ಮಾತ್ರ ಫಸಲು ಉಳಿಯುತ್ತದೆ. ಈಗ ಮಳೆ ಬೀಳದ ಹಿನ್ನೆಲೆಯಲ್ಲಿ ಕೃಷಿಕರು ಆತಂಕಗೊಂಡಿದ್ದಾರೆ. ಈ ಕಾರಣದಿಂದ ಮಳೆಗಾಗಿ ದೇವರ ಮೊರೆ ಹೋಗಿದ್ದೇವೆ ಎಂದು ಹಿರಿಕರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ.ಶಿವಪ್ರಕಾಶ್ ಹೇಳಿದರು.

ಕಾರ್ಯದರ್ಶಿ ಕೀರ್ತಿ ಮುತ್ತಣ್ಣ, ಖಜಾಂಚಿ ಸಿ.ಎಲ್.ವೆಂಕಟೇಶ್, ಸಲಹೆಗಾರ ಎಚ್.ಪಿ.ಸುರೇಶ್ ಸೇರಿದಂತೆ ಗ್ರಾಮದ ಹಿರಿಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

 

Tags:
error: Content is protected !!