ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಳ್ಳ, ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಇದೀಗ ಈ ಭಾರಿ ಗಾಳಿ ಮಳೆ ಶವ ಸಂಸ್ಕಾರಕ್ಕೂ ಅಡ್ಡಿಯಾಗಿದ್ದು, ಸ್ಮಶಾನದ ನೆಲೆ ಬಗೆದಷ್ಟು ನೀರು ಉಕ್ಕಿ ಉಕ್ಕಿ ಬರುತ್ತಿದೆ.
ಜಿಲ್ಲೆಯ ಬಲಮುರಿ ಗ್ರಾಮದ ಕುಮಾರ (42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ಮೃತರ ಕುಟುಂಬ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಬಂದು ಗುಂಡಿ ತೋಡಿದ್ದಾರೆ. ಈ ವೇಳೆ ಗುಂಡಿ ತೆಗೆದಷ್ಟು ನೀರು ಉಕ್ಕಿ ಉಕ್ಕಿ ಬರಲಾರಂಭಿಸಿದೆ. ಮಳೆ ನಡುವೆ ಗುಂಡಿ ತೋಡಿ, ಬಕೇಟ್ ಮೂಲಕ ನೀರನ್ನ ಖಾಲಿ ಮಾಡುತ್ತಾ ಶವ ಸಂಸ್ಕಾರ ಮಾಡಿದ್ದಾರೆ.
ಶೆಡ್ ನಿರ್ಮಿಸಲು ಒತ್ತಾಯ
ಈ ವೇಳೆ ಗ್ರಾಮಸ್ಥರು ಶವ ಸಂಸ್ಕರಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಶೆಡ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.





