ನಾಪೋಕ್ಲು : ಸಮೀಪದ ನೆಲಜಿ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ನಿವಾಸಿ ಅಪ್ಪು ಮಣಿಯಂಡ ರಘು ಸುಬ್ಬಯ್ಯ ಎಂಬವರ ಗದ್ದೆಯಲ್ಲಿ ಹತ್ತು ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡುಬಂದಿದೆ. ಸರ್ಪವನ್ನು ಕಂಡು ಭಯಭೀತರಾದ ಜನರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೂರ್ನಾಡಿನ ಉರ್ಗತಜ್ಞ ಸ್ನೇಕ್ ಪ್ರಜ್ವಲ್ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಭಾಗಮಂಡಲ ಉಪವಲಯ ಅರಣ್ಯ ಇಲಾಖೆಯ ಅಽಕಾರಿ ಕಾಳೇಗೌಡ, ಸಿಬ್ಬಂದಿ ಹಾಜರಿದ್ದರು.




