ಮಡಿಕೇರಿ: ಅಖಿಲ ಕೊಡವ ಸಮಾಜದ ಮುಂದಾಳುತ್ವದಲ್ಲಿ ಫೆಬ್ರವರಿ 2 ರಿಂದ ಕುಟ್ಟದಿಂದ ಆರಂಭಗೊಂಡ ʼಕೊಡವಾಮೆ ಬಾಳೊʼ ಪಾದಯಾತ್ರೆ ಇಂದು ಮಡಿಕೇರಿಗೆ ತಲುಪಿ ಮೆರವಣಿಗೆ ನಡೆಯಲಿದೆ. ಬಳಿಕ ಮ್ಯಾನ್ಸ್ ಕಾಂಪೌಂಡ್ ಕ್ರೀಡಾಂಗಣದಲ್ಲಿ ಬೃಹತ್ ಸಭೆ ಜರುಗಲಿದೆ.
ಈಗಾಗಲೇ ಕೊಡವ ಜನಾಂಗ ಹಾಗೂ ಭಾಷಿಕ ಜನಾಂಗದವರು ಮೇಕೆರಿಯಿಂದ ಮಡಿಕೇರಿಗೆ ಪಾದಯಾತ್ರೆ ಮೂಲಕ ಹೊರಟಿದ್ದು, ಅಂದಾಜು 30000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಡಿಕೇರಿಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದು ಹೇಳಲಾಗಿದೆ.
ಶಿಸ್ತುಬದ್ಧವಾಗಿ ಶಾಂತಿಯುತವಾಗಿ ಕಳೆದ ಐದು ದಿನ 78 ಕಿಲೋಮೀಟರ್ ಕ್ರಮಿಸಿ ಮಡಿಕೇರಿಯಲ್ಲಿ ಇಂದು ಈ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಮಡಿಕೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದ್ದು. ವಿವಿಧ ಕಡೆ ವಾಹನ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಂಪ್ರದಾಯಿಕ ಉಡಿಗೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಇದೇ ಪ್ರಥಮ ಬಾರಿ ಎಲ್ಲರೂ ಒಟ್ಟಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.