Mysore
21
broken clouds

Social Media

ಶುಕ್ರವಾರ, 02 ಜನವರಿ 2026
Light
Dark

ಕೊಡಗು: ಕಾಡಾನೆ ದಾಳಿಗೆ ಅರಣ್ಯ ಸಿಬ್ಬಂದಿ ಬೈಕ್ ಜಖಂ

ಕೊಡಗು: ಮದವೇರಿದ ಕಾಡಾನೆಯೊಂದು ಎಲ್ಲೆಂದರಲ್ಲಿ ಓಡಾಡಿದ್ದಲ್ಲದೆ, ಎದುಗಿಗೆ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಇದರ ಪರಿಣಾಮ ಅರಣ್ಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್‌ನ್ನು ಧ್ವಂಸ ಮಾಡಿರುವ ಘಟನೆ ಸೋಮವಾರಪೇಟೆ ಬಳಿಯ ಕಾಜೂರು ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರು ಇತರೆ ಸಿಬ್ಬಂದಿಗಳಾದ ಆರ್.ಆರ್.ಟಿ ತಂಡದ ದರ್ಶನ್, ಹರ್ಷಿತ್, ವಿನೋದ್ ಹಾಗೂ ಅರಣ್ಯ ರಕ್ಷಕರಾದ ಶ್ರೀಕಾಂತ್‌ ಅವರು ಶನಿವಾರ ಬೆಳಿಗ್ಗೆ 7.30ರ ಸಮಯದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮದವೇರಿದ ಕಾಡಾನೆಯೊಂದು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ ಬಳಿಯಿದ್ದು, ಬೈಕ್‌ ಸವಾರರ ಕಡೆ ಧಾವಿಸಿದೆ. ಇದನ್ನರಿತ ಸವಾರರು ಬೈಕ್ ಬಿಟ್ಟು ಓಡಿದ್ದಾರೆ. ಆದರೆ ಇವರತ್ತಲೇ ಬಂದ ಕಾಡಾನೆ ಬೈಕ್ ಎಸೆದು, ಗುದ್ದಿ ಜಖಂಗೊಳಿಸಿದೆ.

ಬೇಸಿಗೆ ಸಮಯವಾದ ಕಾರಣ ಅರಣ್ಯದಲ್ಲಿ ಮೇವಿಗೆ ಕೊರತೆಯಾಗಿರುವ ಕಾರಣ ಮೇವು ಹಾಗೂ ನೀರನ್ನು ಅರಸಿಕೊಂಡು ಕಾಡಾನೆಗಳು ನಾಡಿನತ್ತ ಧಾವಿಸುತ್ತಿವೆ. ಹೀಗಾಗಿ ಯಾವಾಗ? ಎಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಿಂದ ಸ್ಥಳೀಯರು ಭಯಬೀತರಾಗಿದ್ದು, ರಕ್ಷಣೆಗಾಗಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!