Mysore
26
light rain

Social Media

ಗುರುವಾರ, 18 ಜೂನ್ 2026
Light
Dark

ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಇಲ್ಲ: ಡಿಎಂಕೆ ಸ್ಪಷ್ಟ ಸಂದೇಶ

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ.

ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಡಿಎಂಕೆ ಮಾತುಕತೆ ಆರಂಭಿಸಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ.

ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಬೇಡಿಕೆಯನ್ನು ಡಿಎಂಕೆ ಪರಿಗಣಿಸುವುದು ಕಷ್ಟವಿದೆ. ಹೆಚ್ಚಿನ ಸೀಟುಗಳಿಗೆ ಕಾಂಗ್ರೆಸ್‌ ಬೇಡಿಕೆ ಇಟ್ಟಿದೆ. ಆದರೆ ಮೈತ್ರಿಕೂಟದಲ್ಲಿ ಹೆಚ್ಚು ಪಕ್ಷಗಳು ಇರುವ ಕಾರಣಕ್ಕೆ ಸೀಟು ನೀಡಬಾರದು ಎಂಬುದು ಡಿಎಂಕೆ ವಾದವಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಕಾಂಗ್ರೆಸ್‌ ಬೇಡಿಕೆ ಇಟ್ಟಿರುವಷ್ಟು ಹೆಚ್ಚಿನ ಸೀಟುಗಳನ್ನು ನೀಡುವ ಒತ್ತಾಯಕ್ಕೆ ಡಿಎಂಕೆ ಮಣಿಯುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್‌ ಕನಿಷ್ಠ 39 ಸೀಟುಗಳು ಬೇಕು ಎಂದು ಬೇಡಿಕೆ ಇಟ್ಟಿದ್ದು, ಆಡಳಿತಾರೂಢ ಡಿಎಂಕೆ ನಾಯಕತ್ವ ಇದನ್ನು ನಿರಾಕರಿಸಿದೆ.

ನಾವು ನಮ್ಮ ಪ್ರಸ್ತಾಪವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಅವರಿಗೆ 25 ವಿಧಾನಸಭಾ ಸ್ಥಾನಗಳು ಮತ್ತು 1 ರಾಜ್ಯಸಭಾ ಸ್ಥಾನವನ್ನು ನೀಡಲು ಸಿದ್ಧರಿದ್ದೇವೆ. ಆದರೆ ಕಾಂಗ್ರೆಸ್‌ 39 ವಿಧಾನಸಭಾ ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ಕೇಳುತ್ತಿದೆ ಎಂದು ಡಿಎಂಕೆ ನಾಯಕರೊಬ್ಬರು ಹೇಳಿದ್ದಾರೆ.

 

Tags:
error: Content is protected !!