Mysore
27
clear sky

Social Media

ಗುರುವಾರ, 30 ಏಪ್ರಿಲ 2026
Light
Dark

ಇರಾನ್ ಇಸ್ರೇಲ್ ಸಂಘರ್ಷ ತೈಲ ಬೆಲೆ ಚಿನ್ನದ ಬೆಲೆ ಏರಿಕೆ ..?

ಟೆಹರಾನ್‌: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ ಮೇಲೆ ದಾಳಿ ನಡೆಸುತ್ತಿದೆ. ಈ ರಾಷ್ಟ್ರಗಳ ಸಂಘರ್ಷದಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿ ತೈಲ ಉತ್ಪಾದನೆ, ಮತ್ತು ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿ ತೈಲ ಬೆಲೆ ಏರಿಕೆ ಆಗಬಹುದು. ಇನ್ನು ಭಾರತದ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಿ ಬಂಗಾರ ಬೆಳ್ಳಿ ಬೆಲೆಯಲ್ಲಿ ಸಹ ಏರಿಕೆ ಆಗಬಹುದು ಎಂದು ಚರ್ಚೆ ಆಗುತ್ತಿದೆ.‌

ಸದ್ಯಕ್ಕೆ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷದ ಐವತ್ತು ಸಾವಿರದಿಂದ ಒಂದು ಲಕ್ಷದ ಅರವತ್ತು ಸಾವಿರದವರೆಗೆ ಇದ್ದು, ಬೆಳ್ಳಿ ದರ ಕೆಜಿಗೆ ಎರಡು ಲಕ್ಷ ತೊಂಬತ್ತು ಸಾವಿರ ಇದ್ದು, ಈ ಇರಾನ್ ಇಸ್ರೇಲ್ ಅಮೆರಿಕ ದೇಶಗಳ ಯುದ್ದದ ಪರಿಣಾಮ ಈ ತೈಲ ಬೆಲೆ ಹಾಗೂ ಚಿನ್ನದ ಬೆಲೆ ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ.

 

Tags:
error: Content is protected !!