ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ವಾಚ್ ವಿಚಾರ ಬಂದಾಗ ಯಾರೋ ಗಿಫ್ಟ್ ಆಗಿ ಕೊಟ್ಟಿದ್ರು ಎಂದು ಹೇಳಿದ್ದರು. ರಾಜಕಾರಣಿಗಳಾಗಿ ಇಂತಹ ದುಬಾರಿ ಗಿಫ್ಟ್ ತಗೊಳ್ಳೋದು ತಪ್ಪು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಕಾರ್ಟಿಯರ್ ವಾಚ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಡಿಕೆಶಿ ಅವರು ತಮ್ಮ ವಸ್ತುಗಳು ಏನೇ ಇದ್ದರೂ, ಚುನಾವಣಾ ಸಮಯದಲ್ಲಿ ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಬೇಕಿತ್ತು. ಹಾಗೇ ಮಾಡಿದ್ದರೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.
ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಅವರ ವಿಚೃ ಬಂದಾಗ ಅವರು ತನಗೆ ಯಾರೋ ಗಿಫ್ಟ್ ಆಗಿ ಕೊಟ್ಟಿದ್ದು ಎಂದು ಹೇಳಿದ್ದರು. ರಾಜಕಾರಣಿಗಳಾಗಿ, ಮುಖ್ಯಮಂತ್ರಿಗಳಾಗಿ ಇಂತಹ ಗಿಫ್ಟ್‌ಗಳನ್ನು ತೆಗೆದುಕೊಳ್ಳುವುದು ತಪ್ಪಾಗುತ್ತದೆ. ಸಾಮಾನ್ಯವಾಗಿ ಗಿಫ್ಟ್ ಕೊಟ್ಟರೆ ಏನೋ ಕೆಲಸಕ್ಕಾಗಿಯೇ ಕೊಟ್ಟಿದ್ದಾರೆ ಎನ್ನುವ ಭಾವನೆ ಬರುತ್ತದೆ. ಹೀಗಾಗಿ ನಾವು ಚುನಾವಣೆ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಬಗ್ಗೆ ಡಿಕ್ಲೇರ್ ಮಾಡೋದು ಒಳ್ಳೆಯದು ಎಂದು ಹೇಳಿದರು.





