ಮಡಿಕೇರಿ : ಶಾಸಕ ಮುನಿರತ್ನ ಅವರನ್ನು ಕರಿಟೋಪಿ ಎಂಎಲ್‌ಎ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆದಿದ್ದರೆ ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಏನು ಸ್ವಾತಂತ್ರ್ಯ ತಂದುಕೊಟ್ಟ ಸಂಘವೇ? ಮಹಾತ್ಮ ಗಾಂಧಿಯನ್ನು ಕೊಂದಂತಹ ಸಂಘ. ಇಡೀ ದೇಶದಲ್ಲಿ ಕೋಮುಗಲಭೆ ಹರಡಿಸುತ್ತಿರುವ ಸಂಘ ಅದು. ಆ ಸಂಸ್ಥೆಯನ್ನು ಬ್ಯಾನ್ ಮಾಡುವ ಕೆಲಸ ಆಗಬೇಕಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಆ ಸಂಘವನ್ನು ಬ್ಯಾನ್ ಮಾಡುತ್ತೇವೆ. ದೇಶದಲ್ಲಿ ಓಟ್ ಚೋರಿ ಮೂಲಕ ಚುನಾವಣೆ ಗೆಲ್ಲುವಂತಹ ಕೆಲಸ ಮಾಡುತ್ತಿರುವುದೇ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ಅನ್ನು ಕರಿಟೋಪಿ, ಕಳ್ಳ ಅಂತ ಕರೆದರೂ ನಾನು ಒಪ್ಪಿಕೊಳ್ಳುತ್ತೇನೆ. ಅಂತಹವರನ್ನು ಕಳ್ಳರು ಅಂತ ಕರೆದರೂ ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಇದನ್ನು ಓದಿ: RSS ವಿಷಪೂರಿತ ಸಿದ್ಧಾಂತ ಹರಡಬಾರದು : ಯತೀಂದ್ರ ಸಿದ್ದರಾಮಯ್ಯ
ಇಡೀ ದೇಶವನ್ನು ಹಾಳು ಮಾಡುತ್ತಿರುವುದೇ ಆರ್‌ಎಸ್‌ಎಸ್. ಡಿಕೆಶಿ ಅವರು ಆ ರೀತಿ ಕರೆದಿದ್ದರೆ ಅದನ್ನು ವೈಯಕ್ತಿಕವಾಗಿ ಪ್ರಶಂಸಿಸುತ್ತೇನೆ. ಮುನಿರತ್ನ ವ್ಯಾಪಾರಕ್ಕೋಸ್ಕರ ಬಿಜೆಪಿಗೆ ಸೇರಿಕೊಂಡರು. ಅಲ್ಲಿಗೆ ಹೋಗಿ ಚಡ್ಡಿ ಹಾಕಿಕೊಂಡು ಕರಿಟೊಪಿ ಹಾಕಿಕೊಂಡು ಸುತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂಬಂಧ ಸಚಿವ ಹೆಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿ, ಡಿಕೆಶಿ ಮುನಿರತ್ನ ಅವರನ್ನು ಹಾಗೆ ಕರೆದಿರುವುದು ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯಲ್ಲಿ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಆಗಲ್ಲ. ಒಳ್ಳೆಯ ಆಡಳಿತದ ಬಗ್ಗೆ ಚರ್ಚೆಯಾಗಲ್ಲ. ಬದಲಾಗಿ ಇಂತಹ ವಿಚಾರಗಳ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.





