ಕುಶಾಲನಗರ: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಖಾಸಗಿ ಸಿ ಎನ್ ಜಿ ಘಟಕದಿಂದ ಮಂಗಳವಾರ ಸಂಜೆ ಅನಿಲ ಸೋರಿಕೆ ಉಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬಂಕ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅನಿಲ ಸೋರಿಕೆ ಉಂಟಾಗಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಅಸ್ವಸ್ಥತೆ ಕಾಡಿದೆ ಎಂದು ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಇದೇ ಸಂದರ್ಭ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ಮಂಜುನಾಥ್, ಮಣಿಕಂಠ, ಭೋಗಪ್ಪ, ಚಂದ್ರು, ಗಿರೀಶ್, ಪಿಡಿಒ ಸಂತೋಷ್, ಕಂದಾಯಾಧಿಕಾರಿ ಸಂತೋಷ್ ಮತ್ತು ಗ್ರಾಮಸ್ಥರು ಇದ್ದರು.