Mysore
24
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

ಗೋಣಿಕೊಪ್ಪಲು: ಹುಲಿ ದಾಳಿಗೆ ಕರು ಬಲಿ

ಗೋಣಿಕೊಪ್ಪಲು: ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಕರುವಿನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದ ಘಟನೆ ಶ್ರೀಮಂಗಲ ಬಳಿಯ ಕುಮಟೂರಿನಲ್ಲಿ ನಡೆದಿದೆ.

ಕುಮಟೂರಿನ ಕಳ್ಳೆಂಗಡೆ ಪೂವಯ್ಯ ಅವರಿಗೆ ಸೇರಿದ 2 ವರ್ಷದ ಕರು ಬಲಿಯಾದದ್ದು. ಹುಲಿ ಕರುವನ್ನು ಕೊಂದು ಕಾಫಿ ತೋಟದ ಒಳಗೆ ಎಳೆದೊಯ್ದಿದೆ. ಮಾಲೀಕ ಪೂವಯ್ಯ ಕರುವನ್ನು ಹುಡುಕತೊಡಗಿದಾಗ ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಕರು ಸತ್ತು ಬಿದ್ದಿರುವುದು ಗೋಚರಿಸಿದೆ.

ಹುಲಿಯ ಚಲನವಲನವನ್ನು ಕಂಡು ಹಿಡಿಯಲು ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಕುಟ್ಟ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಿಳಿಸಿದ್ದಾರೆ.

ಕುಟ್ಟ ಪಶುವೈಧ್ಯಾಧಿಕಾರಿ ಗಿರೀಶ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಪೊನ್ನಂಪೇಟೆ ಡಿಆರ್‌ಎಫ್‌ಒ ದಿವಾಕರ್‌, ಗುರುನಾಥ್‌, ಆರ್‌ಆರ್‌ಟಿ ತಂಡದ ರಂಜು, ಹರೀಶ್‌, ರಂಜಿತ್‌, ಸಂಜಯ್‌, ವಿನು, ಭವನ್‌, ಸುಬ್ರಮಣಿ ಪಾಲ್ಗೊಂಡಿದ್ದರು.

Tags: