Mysore
21
overcast clouds
Light
Dark

ಕೊಡಗು ಭೂಕುಸಿತ ಪ್ರದೇಶಗಳಿಗೆ ಜಿ.ಎಸ್‍.ಐ ಅಧಿಕಾರಿಗಳ ತಂಡ ಭೇಟಿ; ಪರಿಶೀಲನೆ

ಮಡಿಕೇರಿ: ಕೊಡಗು ಜಿಲ್ಲೆಗೆ ಆಗಮಿಸಿರುವ ಭಾರತೀಯ ಭೂ ಸರ್ವೇಕ್ಷಣಾ(ಜಿಎಸ್‍ಐ) ಅಧಿಕಾರಿಗಳ ತಂಡವು ಭೂಕುಸಿತ ಪ್ರದೇಶಗಳೀಗೆ ಬುಧವಾರ ಭೇಟಿ ನೀಡಿ, ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ತಾಲ್ಲೂಕಿನ ಮದೆನಾಡು, ಕರ್ತೋಜಿ, ಕೊಯನಾಡು ಶಾಲೆ ಮತ್ತಿತರ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗಳು ಸ್ಥಳ ಪರಿಶೀಲಿಸಿದರು.

ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಾದ ಸೆಂಥಿಲ್ ಕುಮಾರ್ ಮತ್ತು ಸೋವೆಶ್ ಅವರ ನೇತೃತ್ವದ ತಂಡವು ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ಮಾಹಿತಿ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ರಾಹುಲ್, ಲಾಯಲ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಇದ್ದರು.