Mysore
28
overcast clouds

Social Media

ಭಾನುವಾರ, 03 ಮೇ 2026
Light
Dark

ಎರಡೇ ದಿನಕ್ಕೆ 168 ಹೆಕ್ಟೇರ್ ಬಾಳೆ ಬೆಳೆ ನಾಶ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಬಿರುಗಾಳಿ ಮಳೆಗೆ ಕಮರಿದ ರೈತರ ಕನಸು

ಗುಂಡ್ಲುಪೇಟೆ: ರೈತರು ಒಂದಷ್ಟು ಕನಸು ಕಟ್ಟಿಕೊಂಡು ಬೆಳೆಸಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಗಾಳಿ- ಮಳೆಯಿಂದ ನಾಶವಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಹಲವು ಗ್ರಾಮಗಳ ಜಮೀನುಗಳಲ್ಲಿ ನಡೆದಿದೆ.

ಸುಮಾರು ೧೬೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ನಾಶವಾಗಿದ್ದು, ಪ್ರತಿ ಗ್ರಾಮದಲ್ಲೂ ನಷ್ಟದ ಪ್ರಮಾಣವನ್ನು ಸರ್ವೆ ನಡೆಸಲಾಗುತ್ತದೆ. ಸಂತ್ರಸ್ತ ರೈತರು ತೋಟಗಾರಿಕೆ ಇಲಾಖೆ ಹಾಗೂ ತಹಸಿಲ್ದಾರ್ ಗಮನಕ್ಕೆ ತರಬಹುದಾಗಿದೆ.

ತಾಲ್ಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಸುರಿದ ಗಾಳಿ ಮಳೆಗೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.

ಬೇಗೂರು ಭಾಗದಲ್ಲಿ ಗಾಳಿಯ ಪ್ರಮಾಣ ಕಡಿಮೆ ಇದ್ದು ಹೆಚ್ಚು ನಷ್ಟ ಸಂಭವಿಸಿಲ್ಲ. ಆದರೆ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿಗಳ ವ್ಯಾಪ್ತಿಯ ಬೊಮ್ಮಲಾಪುರ, ಅಂಕಹಳ್ಳಿ, ಬೆಳವಾಡಿ, ಶಿವಪುರ, ಹಂಗಳಾಪುರ, ಹಂಗಳ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ತೋಟಗಳು ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

” ಬಿರುಗಾಳಿ ಮಳೆಗೆ ರೈತರು ಕಷ್ಟಪಟ್ಟು ಬೆಳೆದ ಬಾಳೆ ನಾಶವಾಗಿದ್ದು, ನಾನು ಜಮೀನುಗಳಿಗೆ ತೆರಳಿ ವೀಕ್ಷಿಸುತ್ತೇನೆ. ಅಧಿಕಾರಿಗಳಿಗೆ ಈಗಾಗಲೇ ಸರ್ವೆ ನಡೆಸಿ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂಬ ವರದಿ ನೀಡಲು ಸೂಚಿಸಿದ್ದು, ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡುವಂತೆ ಚರ್ಚೆ ನಡೆಸಲಾಗುವುದು.”

-ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ 

” ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದಲ್ಲಿ ನಾಶವಾಗಿದೆ ಎಂಬ ಆಧಾರ ದಲ್ಲಿ ಪರಿಹಾರ ನಿಗದಿಯಾಗು ತ್ತದೆ. ಪರಿಹಾರದ ಮೊತ್ತ ಸರ್ಕಾರದ ಮಟ್ಟದಲ್ಲಿ ನಿಗದಿಯಾಗುತ್ತದೆ. ತೋಟಗಾರಿಕೆ ಇಲಾಖೆಯವರು ಸರ್ವೆ ನಡೆಸಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ಸಲ್ಲಿಸಲಿದ್ದಾರೆ. ಪರಿಹಾರ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ. ಅದು ಸರ್ಕಾರದಿಂದಲೇ ಘೋಷಣೆಯಾಗಬೇಕು.”

-ತನ್ಮಯ್, ತಹಸಿಲ್ದಾರ್, ಗುಂಡ್ಲುಪೇಟೆ

” ಬೇಸಿಗೆಯಲ್ಲೂ ಕಷ್ಟಪಟ್ಟು ಬಾಳೆ ಬೆಳೆ ಬೆಳೆಯಲಾಗಿತ್ತು. ನಮ್ಮ ಶ್ರಮಕ್ಕೆ ಫಲ ಸಿಗುವ ಸಮಯದಲ್ಲೇ ಗಾಳಿ ಮಳೆಯಿಂದಾಗಿ ಬಾಳೆ ನಾಶವಾಗಿದೆ. ಗೊನೆ ಕಟಾವಿಗೆ ಬಂದು ವ್ಯಾಪಾರ ಮಾಡಿ ಒಂದು ಲೋಡ್ ನೀಡಲಾಗಿತ್ತು. ಇನ್ನೆರಡು ಲೋಡ್‌ನಷ್ಟು ಬಾಳೆ ಗೊನೆ ಕಟಾವು ಆಗಬೇಕಿತ್ತು. ಅದರೆ ಗಾಳಿ ಮಳೆಗೆ ಹೀಗಾಗಿದೆ. ವ್ಯಾಪಾರ ಸ್ಥರು ಬಿದ್ದ ಗೊನೆ ತೆಗೆದುಕೊಳ್ಳುವುದಿಲ್ಲ. ಸರ್ಕಾರ ರೈತರ ನೋವು ಅರ್ಥ ಮಾಡಿಕೊಂಡು ಸೂಕ್ತ ಪರಿಹಾರ ನೀಡಬೇಕು.”

-ರೇವಣ್ಣ, ರೈತ, ಹಂಗಳಾಪುರ

Tags:
error: Content is protected !!