ಹೆಚ್.ಡಿ.ಕೋಟೆ: ಕಳೆದ 3 ದಿನಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ದೌರ್ಜನ್ಯ ಮತ್ತು ಹಲ್ಲೆಯಿಂದ ಸಾವನ್ನಪ್ಪಿದ ಗಿರಿಜನ ವ್ಯಕ್ತಿ ಕರಿಯಪ್ಪ ಅವರ ಅಂತ್ಯಕ್ರಿಯೆಯು ಪೊಲೀಸರು, ಅಧಿಕಾರಿಗಳು, ಗಿರಿಜನ ಮುಖಂಡರ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಯಲ್ಲಿ ನೆರವೇರಿತು.
ಅಂತ್ಯಕ್ರಿಯೆ ಸಂದರ್ಭದಲ್ಲಿ ಆದಿವಾಸಿ ಜನರ ಮತ್ತು ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಕರಿಯಪ್ಪ ಅವರ ಮಕ್ಕಳಾದ ಸತೀಶ, ಕುವಾರ, ಕುವಾರಿ, ಸವಿತಾ, ಗಿರಿಜನ ಮುಖಂಡರಾದ ರಾಜಪ್ಪ, ಪುಟ್ಟಬಸವ, ಬಸವರಾಜು, ತಮ್ಮಯ್ಯ, ಭಾಸ್ಕರ, ಅನಿಲ, ಸವಾಜ ಸೇವಕ ಡಾ.ಕೃಷ್ಣಸ್ವಾಮಿ, ಬೆಂಗಳೂರು ಶಿವು, ಮಂಡ್ಯ ಶಿವಕುವಾರ್, ರಾಜೇಶ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಜಯಪ್ರಕಾಶ್, ಸುರೇಶ್ ಶಿವಕುವಾರ್ ಇತರರು ಉಪಸ್ಥಿತರಿದ್ದರು.





