ಜಿಲ್ಲಾ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ
ಚಾಮರಾಜನಗರ: ಹನ್ನೇರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ ಶೈಲಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಈ ಸಂಬoಧ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎನ್.ಮಹೇಶ್ ಅವರೊಂದಿಗೆ ಸಮ್ಮೇಳನ ನಡೆಸುವ ಕುರಿತು ಈಗಾಗಲೆ ಚರ್ಚಿಸಲಾಗಿದೆ. ಉಳಿದಂತೆ ಅಲ್ಲಿನ ನಗರಸಭೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತ್ಯ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ಸ್ಥಳ, ದಿನಾಂಕ ಸೇರಿದಂತೆ ೨ ದಿನಗಳು ನಡೆಯುವ ಸಮ್ಮೇಳನದ ರೂಪುರೇಷೆಗಳನ್ನು ಚರ್ಚಿಸಲು ನಿರ್ಧರಿಸಲಾಯಿತು.
ಸಮಿತಿಯ ಮುಂದಿನ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, ಉದ್ಘಾಟಕರು, ಅತಿಥಿಗಳು, ಇತರೆ ಅತಿಥಿಗಳನ್ನು ಆಯ್ಕೆ ಮಾಡುವ ಕುರಿತು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಸಾಪದ ಗೌರವ ಕಾರ್ಯದರ್ಶಿ ಮಹಾಲಿಂಗಗಿರ್ಗಿ, ನಾಗಲಕ್ಷ್ಮಿ. ಗೌರವ ಕೋಶಾಧ್ಯಕ್ಷ ನಿರಂಜನಕುಮಾರ್. ಗೌರವಾಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಸೋಮಶೇಖರ ಬಿಸಲ್ವಾಡಿ, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ಸುರೇಶ್ ಋಗ್ವೇದಿ, ನಾಗರಾಜು ಕೊಂಗರಳ್ಳಿ, ಯರಿಯೂರು ನಾಗೇಂದ್ರ, ಬಿ.ಟಿ.ಜಗತ್‌ಪ್ರಕಾಶ್, ಉಪಾಧ್ಯಕ್ಷರಾದ ಆರ್.ಡಿ. ನಾಗರಾಜು, ಆರ್.ಎಚ್.ನಂಜುoಡಸ್ವಾಮಿ, ಮಹಿಳಾ ಸದಸ್ಯರಾದ ಗುರುಲಿಂಗಮ್ಮ ನಾಗೇಂದ್ರ, ಮಂಜುಳಾ ನಾಗರಾಜು ಭಾಗವಹಿಸಿದ್ದರು.