Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ ವತಿಯಿಂದ ವಿಶ್ವ ಘೇಂಡಾಮೃಗ ದಿನ ಆಚರಣೆ

ಮೈಸೂರು : ನಗರದ ಮೃಗಾಲಯದಲ್ಲಿಂದು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ ವತಿಯಿಂದ ವಿಶ್ವ ಘೇಂಡಾಮೃಗ ದಿನವನ್ನು ಆಚರಣೆ ಮಾಡಲಾಯಿತು.
ಮೃಗಾಲಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಇಂಡಿಯಾದ ವಿರಾಟ್ ಮತ್ತು ಬಬ್ಲಿ ಘೆಂಡಾ ಮೃಗಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪೆನಿ ದತ್ತು ತೆಗೆದುಕೊಂಡಿತ್ತು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಟಿ. ಪಳನಿಕುಮಾರ್  ಅವರು  ಮಾತನಾಡಿ ಭೂಮಿಯ ವೈಶಿಷ್ಟಪೂರ್ಣ ಜೀವಿಯಲ್ಲಿ ಒಂದಾಗಿರುವ ಘೆಂಡಾ ಮೃಗಗಳ ಸಂರಕ್ಷಣೆಗೆ ದೇಶದ ನಾಗರಿಕರು ಹೆಚ್ಚಿನ ಕಾಳಜಿ ವಹಿಸಬೇಕು, ಬೇಟೆಯಾಡುವುದನ್ನು ನಿಲ್ಲಿಸಬೇಕು ,ಹವಾಮಾನ ಬದಲಾವಣೆ ಮುಂತಾದ ಅಂಶಗಳಿಂದ ಈ ಪ್ರಾಣಿಗಳು ಅಳಿವಿನತ್ತ ಸಾಗಿವೆ. ಜನರು ಇವುಗಳ ಬಗ್ಗೆ ಜಾಗೃತರಾಗಿ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಯುವಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಘೆ೦ಡಾಮೃಗಗಳ ಸಂರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು .ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ , ಮೃಗಾಲಯದ ಕಾರ್ಯವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ,ವಿಭಾಗೀಯ ವ್ಯವಸ್ಥಾಪಕ ರಾದ ಸುನೀಲ್ ಕುಮಾರ್ ಮಿಶ್ರಾ ,ಮುರಳೀಧರ್ ,ಕಂಪನಿಯ ಮಾರುಕಟ್ಟೆ ಅಧಿಕಾರಿಗಳು ,ಪ್ರಮುಖ ವಿತರಕರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2010 ರಲ್ಲಿ ಮೊದಲ ಬಾರಿಗೆ ಸೌತ್‌ ಆಫ್ರಿಕಾದಲ್ಲಿ ವಿಶ್ವ ಘೇಂಡಾಮೃಗ ದಿನ ಆಚರಿಸಲಾಯಿತು. 2011 ರಿಂದ ವಿಶ್ವದಾದ್ಯಂತ ಪ್ರತಿ ವರ್ಷ ಸೆ. 22 ರಂದು ಈ ದಿನ ಆಚರಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಇಂದು ಚಾಮರಾಜೇಂದ್ರ ಮೃಗಾಲಯದಲ್ಲಿ ಆಚರಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ