ಮೈಸೂರು : ಹಾಸನಾಂಭ ಜಾತ್ರಾ ಮಹೋತ್ಸವದ ಅಂಗವಾಗಿ ಅ.೯ರಿಂದ ಅ.೨೨ರವರೆಗೆ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಕಾರ್ಯಾಚರಣೆಗಾಗಿ ೧೧೫ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ.
ಇದನ್ನು ಓದಿ : ಅಕ್ಟೋಬರ್.9ರಂದು ಹಾಸನಾಂಬ ದೇವಾಲಯ ಬಾಗಿಲು ಓಪನ್
ಮೈಸೂರು ನಗರದಿಂದ ೩೦, ಮೈಸೂರು ಗ್ರಾಮಾಂತರ ೨೦, ಮಂಡ್ಯ ೨೦, ಚಿಕ್ಕಮಗಳೂರು ೨೫ ಹಾಗೂ ತುಮಕೂರಿಂದ ೨೦ ಬಸ್‌ಗಳು ಸೇರಿದಂತೆ ಒಟ್ಟು ೧೧೫ ಹೆಚ್ಚುವರಿ ಬಸ್ ಓಡಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ ಅಭಿಯಂತರರು, ಐದು ಜಿಲ್ಲೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಐದು ಜಿಲ್ಲೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹಾಸನ ವಿಭಾಗದ ಡಿಸಿಯವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅ.೮ರಂದು ಮಧ್ಯಾಹ್ನವೇ ಐದು ವಿಭಾಗಗಳಿಂದ ಹೆಚ್ಚುವರಿ ಬಸ್‌ಗಳನ್ನು ಪಡೆದು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು. ಕಾರ್ಯಾಚರಣೆ ಮುಗಿದ ಬಳಿಕ ವಾಹನಗಳನ್ನು ಆಯಾ ವಿಭಾಗಗಳಿಗೆ ಹಿಂದಿರುಗಿಸುವಂತೆ ಸೂಚಿಸಿದ್ದಾರೆ.





