Mysore
25
overcast clouds

Social Media

ಬುಧವಾರ, 01 ಜುಲೈ 2026
Light
Dark

ಹಾಸನ: ಕುಡಿಬೇಡ ಎಂದು ಬುದ್ದಿ ಹೇಳಿದ್ದ ಸ್ನೇಹಿತನನ್ನೇ ಹತ್ಯೆಗೈದ ದುರುಳ

ಹಾಸನ: ಕುಡಿಯುವುದನ್ನು ಬಿಡು ಎಂದು ಬುದ್ಧಿ ಹೇಳಿದ್ದಕ್ಕೆ ದುರುಳನೋರ್ವ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ರಾಂಪುರದಲ್ಲಿ ನಡೆದಿದೆ.

ಗಿರೀಶ್‌ ಎಂಬುವವರೇ ಕೊಲೆಯಾದ ವ್ಯಕ್ತಿಯಾಗಿದ್ದು, ರಮೇಶ್‌ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಅಂಗಡಿ ಬಳಿ ಕುಳಿತಿದ್ದ ಗಿರೀಶ್‌ ಬಳಿ ರಮೇಶ್‌ ಕುಡಿದು ಮಾತನಾಡುತ್ತಿದ್ದ. ಈ ವೇಳೆ ಗಿರೀಶ್‌ ಆರೋಪಿ ರಮೇಶನಿಗೆ ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದರು.

ಇಷ್ಟಕ್ಕೆ ಸಿಟ್ಟಿಗೆದ್ದ ರಮೇಶ್ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!