Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಗುಂಡ್ಲುಪೇಟೆ : ಮೈದುಂಬಿ ಆಕರ್ಷಿಸುತ್ತಿವೆ ಕೆರೆಗಳು

ಹಂಗಳ ಹಿರಿಕೆರೆ ಸೊಬಗನ್ನು ಸವಿಯಲು ಬರುತ್ತಿರುವ ಜನರ ದಂಡು

ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಸತತ ಮಳೆ ಬೀಳುತ್ತಿರುವ ಕಾರಣ ಹಂಗಳದ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ಹಿರಿಕೆರೆ, ದೊಡ್ಡಕೆರೆ, ಬರಗಿ ಕೆರೆ, ಕೊಟೆಕೆರೆ ಕೆರೆ, ಬೇರಂಬಾಡಿ ಕೆಂಪುಸಾಗರ, ಶಿವಪುರ ಕಲ್ಕಟ್ಟ ಕೆರೆ, ಮಂಚಹಳ್ಳಿ ಕೆರೆ, ಬೆಳಚಲವಾಡಿ ಕೆರೆ ಸೇರಿದಂತೆ ತಾಲ್ಲೂಕಿನ ಅನೇಕ ಕೆರೆಗಳು ಮೈದುಂಬಿದ್ದು ಹಂಗಳ ಹಾಗೂ ಬರಗಿ ಕೆರೆ ಕೋಡಿ ಬಿದ್ದು ಹರಿಯುತ್ತಿದ್ದು ನೋಡುಗರ ಮನ ಸೆಳೆಯುತ್ತಿವೆ.
ಹಂಗಳ ಹಿರಿಕೆರೆ ಕೋಡಿಬಿದ್ದು ಝರಿಯಂತೆ ಹರಿಯುತ್ತಿದ್ದು ನೊಡುಗರನ್ನು ಆಕರ್ಷಿಸುತ್ತಿದೆ. ಪ್ರತಿನಿತ್ಯ ಪ್ರಕೃತಿ ಸೊಬಗು ಹಾಗೂ ಮೈದುಂಬಿದ ಕೆರೆಯನ್ನು ವೀಕ್ಷಿಸಲು ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಇದೇ ರೀತಿ ಮಳೆಯ ಆರ್ಭಟ ಮುಂದುವರಿದರೆ ತಾಲ್ಲೂಕಿನ ಬಹುತೇಕ ಕೆರೆ-ಕಟ್ಟೆಗಳು ತುಂಬಿ ಹರಿಯಲಿದ್ದು ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಲಿದೆ. ಕುಡಿಯುವ ನೀರಿಗೆ ಹಾಗೂ ವ್ಯವಸಾಯಕ್ಕೆ ಅನುಕೂಲವಾಗಲಿದೆ. ತಾಲ್ಲೂಕಿನಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿರಲಿಲ್ಲ. ಕೆಲವು ಗ್ರಾಮಗಳಲ್ಲಿ ಅಂತರ್ಜಲದ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ ಅದನ್ನು ನಿವಾರಿಸಿದೆ.


ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇರುವ ಹಿರಿಕೆರೆ ಹಾಗೂ ದೊಡ್ಡ ಕೆರೆ ಮನಮೋಹಕವಾಗಿವೆ. ಕೆರೆಗಳು ತುಂಬಿದ ಪರಿಣಾಮ ರೈತರಿಗೆ, ಕುಡಿಯುವ ನೀರಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ೋಂಜನೆ ಮೂಲಕ ಬರಗಾಲದಂತಹ ಸಮಯದಲ್ಲಿ ನೀರು ತುಂಬಿಸಿದರೆ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ.
– ಎಚ್.ಎಂ.ನಂದೀಶ್, ಗ್ರಾ.ಪಂ ಸದಸ್ಯ ಹಾಗೂ ಪ್ರಗತಿಪರ ರೈತ


ಈ ಮೊದಲು ಬರಗಾಲವಿದ್ದಾಗ ಹಂಗಳ ಗ್ರಾಮ ದೊಡ್ಡ ಗ್ರಾಮವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿತ್ತು. ಕೊಳವೆ ಬಾವಿಗಳು ಬರಿದಾಗಿದ್ದವು. ಇತ್ತೀಚಿನ ದಿನಗಳಲ್ಲಿ ಮಳೆಯಿಂದ ಹಂಗಳದ ಕೆರೆಗಳು ತುಂಬಿದ ಪರಿಣಾಮ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ.
-ಶಾಂತಮಲ್ಲಪ್ಪ, ಪಿಡಿಒ, ಹಂಗಳ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ