Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಂಡ್ಯ: ಕುಸಿದು ಬಿದ್ದು ಬಾಲಕಿ ಸಾವು

ಮಂಡ್ಯ: ಹೃದಯಘಾತದಿಂದ ಕುಸಿದುಬಿದ್ದು ಬಾಲಕಿ ಮೃತಪಟ್ಟ ಘಟನೆ ತಾಲ್ಲೂಕಿನ ಬಿ.ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಹಂಪಾಪುರ ಗ್ರಾಮದ ಮನುಜ ಎಂಬ ಬಾಲಕಿಯು ಬಿ.ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ನೇ ತರಗತಿ ಓದುತ್ತಿದ್ದು, ಮಂಗಳವಾರ ಎಂದಿನAತೆ ಶಾಲೆಗೆ ಆಗಮಿಸಿದ್ದಾಳೆ. ಮಧ್ಯಾಹ್ನದ ವರೆಗೂ ಆರೋಗ್ಯವಾಗಿಯೇ ಇದ್ದ ಬಾಲಕಿಯು ಮಧ್ಯಾಹ್ನ ೩.೩೦ ಗಂಟೆ ಸಮಯದಲ್ಲಿ ಕ್ರೀಡಾ ಚಟುವಟಿಕೆಗೆಂದು ಬಿಟ್ಟಾಗ, ಷೂ ಕಳಚಿ ಸ್ವಲ್ಪ ಹೆಜ್ಜೆ ಹಾಕಿದ ಸಮಯದಲ್ಲಿ ಸುಸ್ತಾಗಿ ಕುಸಿದು ಬಿದ್ದಿದ್ದಾಳೆ.
ನಂತರ ಶಿಕ್ಷಕರು ಅಲ್ಲೇ ಪಕ್ಕದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಬಾಲಕಿಯನ್ನು ಕರೆದುಕೊಂಡು ಹೋದರೂ ಸಹ ಅಷ್ಟರೊಳಗೆ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ, ನಂತರ ಬಾಲಕಿಯ ಮೃತದೇಹವನ್ನು ಹಂಪಾಪುರ ಗ್ರಾಮಕ್ಕೆ ಪೋಷಕರು ತೆಗೆದುಕೊಂಡು ಹೋಗಿ ಅಂತ್ಯಸAಸ್ಕಾರ ಮುಗಿಸಿದ್ದಾರೆ.
ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯನ್ನು ನೀಡಿರುವ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯ ಅವರು ಶಿಕ್ಷಕರು ಹಾಗೂ ದಾನಿಗಳಿಂದಲೂ ಪರಿಹಾರ ಒದಗಿಸುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!