ಸಫಾರಿಗೆಂದು ತೆರಳುವ ಪ್ರತಿಯೊಬ್ಬರೂ ಕಾಡಿನ ಪ್ರಮುಖ ಪ್ರಾಣಿಗಳನ್ನು ಕಣ್ಣಾರೆ ನೋಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಅದರಲ್ಲಿಯೂ ದಟ್ಟ ಅರಣ್ಯದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗುವ ಒಂಟಿ ಸಲಗ ಹಾಗೂ ಹುಲಿಯನ್ನು ನೋಡುವ ಬಯಕೆ ಯಾರಿಗೆ ತಾನೇ ಇರಲ್ಲ ಹೇಳಿ. ಹೀಗೆ ಈ ಎರಡು ಪ್ರಾಣಿಗಳು ಕಣ್ಣಿಗೆ ಬೀಳಲಿ ಎಂದುಕೊಂಡು ಸಫಾರಿಗೆ ಹೊರಟ ಪ್ರಾಣಿ ಪ್ರಿಯರೊಬ್ಬರಿಗೆ ಎರಡೂ ಪ್ರಾಣಿಗಳನ್ನು ಒಟ್ಟಿಗೆ ನೋಡುವ ಅದೃಷ್ಟ ಒದಗಿ ಬಂದಿದೆ.
ಹೌದು, ನಿನ್ನೆ ಸಂಜೆಯ ವೇಳೆ ನಾಗರಹೊಳೆ ತಾಕನಕೋಟೆ ಸಫಾರಿಗೆ ತೆರಳಿದ್ದ ವ್ಯಕ್ತಿಯೋರ್ವರು ಈ ಅತಿ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಹುಲಿರಾಯ ನಡೆದುಕೊಂಡು ಬರುತ್ತಿದ್ದರೆ ಅದರ ಹಿಂದೆ ತುಸು ದೂರದಲ್ಲಿ ದೈತ್ಯ ಆನೆಯೊಂದು ಬರುತ್ತಿರುವ ದೃಶ್ಯವನ್ನು ನಾವು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.





