Mysore
27
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಡಿ.17ರಂದು ‘ಅಣ್ಣಾವ್ರ ಹಾಡುಗಳು’ ಸಂಗೀತ ಕಾರ್ಯಕ್ರಮ

ಮೈಸೂರು: ನಗರದ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿ.೧೭ರಂದು ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ಅಣ್ಣಾವ್ರ ಹಾಡುಗಳು’ ಶೀರ್ಷಿಕೆಯಡಿ ಡಾ.ರಾಜ್‌ಕುಮಾರ್ ಅವರು ಹಾಡಿರುವ ಚಲನಚಿತ್ರಗೀತೆಗಳ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್‌ನ ಸುಧೀಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ರಾಜ್‌ಕುಮಾರ್ ಧ್ವನಿ ಹೋಲುವ ಗಾಯಕ ಮೈಸೂರು ಜಯರಾಂ, ಶ್ರೀಕಂಠರಾವ್, ಸುಧೀಂದ್ರ, ಡಾ.ವೈ.ಡಿ.ರಾಜಣ್ಣ, ಸುರೇಶ್, ಪ್ರೇಮ್, ಉಮೇಶ್, ಗಾಯಕಿಯರಾದ ಸರ್ವಮಂಗಳ, ಶಶಿಕಲಾ, ರಶ್ಮಿ, ಶಾರದಾಂಬ ಅವರು ಡಾ.ರಾಜ್‌ಕುಮಾರ್ ಹಾಡಿರುವ ಗೀತೆಗಳನ್ನು ಹಾಡಲಿದ್ದಾರೆ.
ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್‌ನ ಪದಾಧಿಕಾರಿಗಳಾದ ಬಾಲು ಪ್ರಕಾಶ್, ಶ್ರೀಕಂಠರಾವ್, ಸುಚೀಂದ್ರ, ಸುರೇಶ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!